ಮಂಗಳೂರು ವಿವಿ ಕಾಲೇಜಿನಲ್ಲಿ ರಾಷ್ಟ್ರೀಯ ಪಕ್ಷಿ ದಿನಾಚರಣೆ
Update: 2017-01-10 13:35 IST
ಮಂಗಳೂರು, ಜ.10: ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಪರಿಸರ ಸಂಘ, ಅನ್ವೇಷಣ ಸಂಘ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ಪಕ್ಷಿ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಹೇಮಚಂದ್ರ ಭಾಗವಹಿಸಿ ಪಕ್ಷಿಗಳ ದಿನಾಚರಣೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
ವಿ.ವಿ. ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಡಾ.ಶೋಭಾ, ಡಾ.ಭಾರತಿಪ್ರಕಾಶ್, ಗೀತಾ ಎಂ., ಡಾ.ನಾಗರತ್ನಾ ಕೆ.ಎ., ಡಾ.ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಪರಿಸರ ಸಂಘದ ನಿರ್ದೇಶಕ ಡಾ.ಮೀನಾಕ್ಷಿ ವಂದಿಸಿದರು. ವಿಜ್ಞಾನ ಸಂಘದ ಸಹನಿರ್ದೇಶಕ ಡಾ.ಸಿದ್ದರಾಜು ಕಾರ್ಯಕ್ರಮ ನಿರೂಪಿಸಿದರು.