ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಜತೆ ಕಾರ್ಯದರ್ಶಿ ಬಾಪು ಮುಸ್ಲಿಯಾರ್ ನಿಧನ
ಮಂಗಳೂರು, ಜ.10: ಕೇರಳ ಹಜ್ ಕಮಿಟಿಯ ಅಧ್ಯಕ್ಷ, ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಕಾರ್ಯದರ್ಶಿ ಹಾಗೂ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಜೊತೆ ಕಾರ್ಯದರ್ಶಿಯಾಗಿದ್ದ ಶೈಖುನಾ ಕೋಟುಮಲ ಬಾಪು ಮುಸ್ಲಿಯಾರ್ ಮಂಗಳವಾರ ಮಧ್ಯಾಹ್ನ 12:30ರ ಸುಮಾರಿಗೆ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದ ಕಾರಣ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಮಧ್ಯಾಹ್ನ ನಿಧನರಾದರು.
ಉಸ್ತಾದ್‌ರ ಅಂತಿಮ ಸಂಸ್ಕಾರವು ಜ.11ರಂದು ಬೆಳಗ್ಗೆ 9 ಗಂಟೆಗೆ ಅವರ ತವರೂರಾದ ಕಾಳಂಬಾಡಿ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಸಂತಾಪ:
ಎಸ್ಕೆಐಎಂವಿ ಬೋರ್ಡ್ ಸದಸ್ಯರಾದ ಕೆ.ಎಸ್.ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಹಾಜಿ ಜಿ.ಅಬೂಬಕರ್ ಹಾಜಿ ಗೋಳ್ತಮಜಲು, ಕಲ್ಲಡ್ಕ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಗೋಲ್ಡನ್, ಇಸ್ಮಾಯೀಲ್ ತಂಙಳ್ ಉಪ್ಪಿನಂಗಡಿ, ಆಸಿಫ್ ಕುನ್ನಿಲ್, ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮತ್ತಿತರರು ಬಾಪು ಮುಸ್ಲಿಯಾರ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.