×
Ad

ಕಾಂಗ್ರೆಸ್ ಕಾರ್ಯಕರ್ತರ ಸಭೆ

Update: 2017-01-10 16:55 IST

ಬಂಟ್ವಾಳ, ಜ. 10: ಆಡಳಿತ ಪಕ್ಷವೇ ಆಗಲಿ ವಿರೋಧ ಪಕ್ಷವೇ ಆಗಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಇಚ್ಛಾ ಶಕ್ತಿಯಿಂದ ಪ್ರಯತ್ನಿಸಬೇಕು . ಪ್ರಚಾರ ರಾಜಕೀಯವನ್ನ ಮಾಡದೆ ಬಡವರ ಕಣ್ಣೀರನ್ನು ಒರೆಸಿ ಬಡವ ಶ್ರೀಮಂತ ಎಂಬ ಕೀಳು ಭಾವನೆಯನ್ನು ಬದಿಗಿಟ್ಟು ಸಾಮಾಜಿಕ ಚಿಂತನೆಯನ್ನು ಪ್ರಚುರಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನುಡಿದರು.

ಕಡೇಶ್ವಾಲ್ಯ ವಲಯ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಲ್ಲಾಜೆ ಮೈದಾನದಲ್ಲಿ ಜರಗಿದ ಕಾರ್ಯಕರ್ತರ ಸಭೆ ಮತ್ತು ಕೃತಜ್ಞತಾ ಸಮಾರಂಭ ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕಾಗಿ ಅದೆಷ್ಟೋ ನಾಯಕರು ಪ್ರಾಣ ತ್ಯಾಗ ಮಾಡಿ ಭೂ ಮಸೂದೆ ಕಾನೂನು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮಾಡಿ ಬಡವರಿಗೆ ಕೂಡ ರಾಜಕೀಯ ಜೀವನ ಕೊಟ್ಟ ಪಕ್ಷ ಕಾಂಗ್ರೆಸ್. ನೋಟು ಅಮಾನ್ಯಗೊಳಿಸಿ ಕಾರ್ಯಕ್ರಮ ಮಾಡಿ ಕಪ್ಪು ಹಣ ತರುತ್ತೇನೆ ಎಂಬ ಸುಳ್ಳು ಪ್ರಚಾರವನ್ನು ಮಾಡುವ ಪಕ್ಷ ನಮ್ಮದಲ್ಲ ಎಂದು ನುಡಿದರು.

ಸ್ವಾಭಿಮಾನದಿಂದ ಬದುಕುವುದರಿಂದ ಯಶಸ್ಸನ್ನು ಗಳಿಸಬಹುದು. ಜಾತ್ಯಾತೀತ ಸಿದ್ಧಾಂತದಲ್ಲಿ ಜಾತಿ ಧರ್ಮ ಎಂಬ ಭೇಧ ಬಾವ ಮಾಡದೆ ಅಪನಂಬಿಕೆಯನ್ನು ಹುಟ್ಟಿಸದೆ ಕಾಂಗ್ರೆಸ್ ಪಕ್ಷ ಬೆಳೆದು ಬಂದಿದೆ. ನೋಟು ಬದಲಾವಣೆಯಿಂದ ಮಧ್ಯಮ ವರ್ಗದ ಜನರಿಗೆ ಮತ್ತು ಬಡವರಿಗೆ ತುಂಬಾ ತೊಂದೆರೆಯಾಗುತ್ತಿದೆ ಎಂದು ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನುಡಿದರು.

ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಸದಸ್ಯ ಸಂಜೀವ ಪೂಜಾರಿ, ಪ್ರಗತಿಪರ ಕೃಷಿಕರಾದ ವಾಸು ಪೂಜಾರಿ ಪತ್ತುಕೊಡಂಗೆ, ವಿಠಲ ಶೆಟ್ಟಿ ಮಿತ್ತಿಮಾರು, ಕಡೇಶ್ವಾಲ್ಯ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಈಶ್ವರ ಪೂಜಾರಿ ಉಪಸ್ಥಿತರಿದ್ದರು.

ವಲಯ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಚಿದಾನಂದ ಕಡೇಶ್ವಾಲ್ಯ ಸ್ವಾಗತಿಸಿದರು. ಕಾರ್ಯದರ್ಶಿ ಮೋಹನ್ ಕುಮಾರ್ ವಂದಿಸಿದರು. ಶೀನ ನಾಯ್ಕ ನೆಕ್ಕಿಲಾಡಿ ಮತ್ತು ಯೋಗೀಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News