×
Ad

ಮನಪಾ ಆಡಳಿತ ನಿವೇಶನರಹಿತರಿಗೆ ಅನ್ಯಾಯವೆಸಗಿದೆ : ಸುನೀಲ್ ಕುಮಾರ್ ಬಜಾಲ್

Update: 2017-01-10 18:38 IST

ಮಂಗಳೂರು, ಜ.10: ಮೂರು ವರ್ಷಗಳಿಂದ ನಿವೇಶನರಹಿತರು ಪ್ರತಿಭಟನೆ ನಡೆಸಿದಾಗಲೆಲ್ಲಾ ಮನಪಾ ಪೊಳ್ಳು ಭರವಸೆಗಳನ್ನು ನೀಡಿದೆ. ಇತ್ತೀಚೆಗೆ ಬಿಡುಗಡೆ ಮಾಡಲಾದ ಮಂಗಳೂರು ದಕ್ಷಿಣ ಸಮಿತಿಯ ನಿವೇಶನ ಫಲಾನುಭವಿಗಳ ಪಟ್ಟಿಯಲ್ಲಿ ಅನ್ಯಾಯವಾಗಿದೆ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದ್ದಾರೆ.

ನಗರದ ಉರ್ವಸ್ಟೋರ್‌ನಲ್ಲಿ ನಡೆದ ನಿವೇಶನರಹಿತರ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯಲ್ಲಿ ನಿವೇಶನರಹಿತರ ಹೋರಾಟ ಸಮಿತಿಯ ನಾಯಕರಾದ ಕೃಷ್ಣಪ್ಪಕೊಂಚಾಡಿ, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ, ಪ್ರೇಮನಾಥ ಜಲ್ಲಿಗುಡ್ಡೆ ಮಾತನಾಡಿದರು.

ಪ್ರದೀಪ್ ಉರ್ವಸ್ಟೋರ್ ಸ್ವಾಗತಿಸಿದರು.

ಮನೋಜ್ ಉರ್ವಸ್ಟೋರ್ ವಂದಿಸಿದರು.

ಹೋರಾಟದಲ್ಲಿ ಪ್ರಭಾವತಿ, ಉಮಾಶಂಕರ್, ಇಕ್ಬಾಲ್, ಧನರಾಜ್, ಪ್ರಶಾಂತ್ ಎಂ.ಬಿ., ಶುೃತಿ, ಹೇಮಾವತಿ, ಹರಿನಾಕ್ಷಿ, ಅಶೋಕ್ ಶ್ರೀಯಾನ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News