ಬಿಜೆಪಿ ಯುವ ಮೋರ್ಚಾದಿಂದ 1766ಬೂತ್‌ಗಳಲ್ಲಿ ವಿವೇಕಾನಂದ ಜಯಂತಿ
Update: 2017-01-10 19:29 IST
ಮಂಗಳೂರು,ಜ.10: ಬಿಜೆಪಿ ಯುವ ಮೋರ್ಚಾದಿಂದ ದ.ಕ ಜಿಲ್ಲೆಯ 1766 ಬೂತ್‌ಗಳಲ್ಲಿಯೂ ಜನವರಿ 12ರಿಂದ ಒಂದು ವಾರಗಳ ಕಾಲ ಸ್ವಾಮಿ ವಿವೇಕಾನಂದ ಜಯಂತಿಯ ಆಚರಣೆಯ ಅಭಿಯಾನ ನಡೆಯಲಿದೆ ಎಂದು ಅಧ್ಯಕ್ಷ ಹರೀಶ್ ಪೂಂಜಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜಿಲ್ಲೆಯ ಪ್ರತಿ ಬೂತ್ ಮಟ್ಟದಲ್ಲಿ ವಿವೇಕ್ ಬ್ಯಾಂಡ್ ಧಾರಣೆಯೊಂದಿಗೆ (‘ಬೀ ಗುಡ್ ಡು ಗುಡ್ ’) ಉಪಕಾರಿಯಾಗು ಉತ್ತಮನಾಗು ಸಂದೇಶವನ್ನು ಯುವ ಜನರಲ್ಲಿ ನೆಲೆಸುವಂತೆ ಮಾಡುವ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಎಲ್ಲಾ ಶಕ್ತಿ ಕೇಂದ್ರಗಳಲ್ಲಿ ಬೈಠಕ್ ನಡೆಯಲಿದೆ ಎಂದು ಹರೀಶ್ ಪೂಂಜಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮೋರ್ಚಾದ ಪದಾಧಿಕಾರಿಗಲಾದ ಹರೀಶ್ ಮೂಡುಶೆಡ್ಡೆ, ಶಶಾಂಕ, ಪದ್ಮ ನಾಭ ಶೆಟ್ಟಿ, ಸುನಿಲ್ ದಡ್ಡು, ಅನೀಶ್, , ಸಂದೀಪ್ ಶೆಟ್ಟಿ, ಸುಜೀತ್ , ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.