ಜ.10ರಿಂದ ಆಲಡ್ಕ ಮಸೀದಿಯಲ್ಲಿ 50ನೆ ಕುತುಬಿಯತ್ ವಾರ್ಷಿಕ ಸಮ್ಮೇಳನ

Update: 2017-01-10 14:12 GMT

ಆಲಡ್ಕ, ಜ.9: ಆಲಡ್ಕ ಮುಹಿಯ್ಯದ್ದೀನ್ ಜುಮಾ ಮಸೀದಿಯಲ್ಲಿ ಅಶೈಖ್ ಅಬ್ದುಲ್ ಖಾದರ್ ಜೀಲಾನಿಯವರ 877ನೆ ಅನುಸ್ಮರಣೆ ಹಾಗೂ 50ನೆ ಕುತುಬಿಯತ್ ವಾರ್ಷಿಕ ಮಹಾ ಸಮ್ಮೇಳನ ಮರ್‌ಹೂಂ ತಾಜುಲ್ ಉಲೆಮಾ ಕೆ.ಕೆ ಸ್ವದಖತ್ತುಲ್ಲ ಮೌಲವಿ ವೇದಿಕೆಯಲ್ಲಿ ಜ.10ರಿಂದ ಪ್ರಾರಂಭಗೊಂಡು ಜ.15ರಂದು ಸಮಾರೋಪಗೊಳ್ಳಲಿದೆ.

ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಗಣ್ಯರು, ಉಲಮಾಗಳು, ಉಮರಾಗಳು ಪಾಲ್ಗೊಳ್ಳಲಿದ್ದಾರೆ ಎಂದು ಪಾಣೆಮಂಗಳೂರು ಆಲಡ್ಕ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಬಾವ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News