ಬ್ಯೂಟೀಷಿಯನ್ ಆತ್ಮಹತ್ಯೆ ಪ್ರಕರಣ: ತಂಡಗಳ ನಡುವೆ ಹೊಡೆದಾಟ
ಉಳ್ಳಾಲ , ಜ.10 : ಬ್ಯೂಟೀಷಿಯನ್ ಕೆಲಸ ಮಾಡುತ್ತಿದ್ದ ಯುವತಿ ನಿಗೂಢ ರೀತಿಯಲ್ಲಿ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ತಂಡಗಳ ಮಧ್ಯೆ ಹೊಡೆದಾಟ ನಡೆಸಿರುವ ಘಟನೆ ನಡೆದಿದೆ.
ಹೊಡೆದಾಟದಲ್ಲಿ ಸುನಿಲ್, ವಿಶ್ವನಾಥ್, ಪವನ್ ಮತ್ತು ಸೂರಜ್ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಘಟನೆಯ ವಿವರ:
ಮಂಗಳೂರಿನಲ್ಲಿ ಬ್ಯೂಟೀಷಿಯನ್ ಆಗಿದ್ದ ಮಧುಶ್ರೀ (21) ಶನಿವಾರ ತಡರಾತ್ರಿ ಮನೆಯಲ್ಲಿ ನೇಣುಬಿಗಿದು ಸಾವೀಗೀಡಾಗಿದ್ದಳು. ಆಕೆಯ ಕೈಯಲ್ಲಿ ಸೂರಜ್ ಎಂಬಾತನ ಹೆಸರು ಬರೆಯಲಾಗಿತ್ತಾದರೂ ಹೆತ್ತವರು ಈ ಬಗ್ಗೆ ಠಾಣೆಗೆ ದೂರು ನೀಡಿರಲಿಲ್ಲ. ಸಂತೋಷನಗರದಲ್ಲಿ ಅಂಗಡಿಗೆ ಬಂದಿದ್ದ ಸೂರಜ್ ಎಂಬಾತನಿಗೆ ಪಂಡಿತ್ ಹೌಸ್‌ನ ಸುನೀಲ್, ವಿಶ್ವನಾಥ್, ಪವನ್ ಹಲ್ಲೆ ನಡೆಸಿದ್ದು , ಈ ಸಂದರ್ಭ ಸೂರಜ್‌ನ ತಲೆ ಒಡೆದಿದೆ. ಇದನ್ನು ಕಂಡ ಸೂರಜ್ ಸ್ನೇಹಿತರೂ ಆರೋಪಿಗಳ ವಿರುದ್ಧ ಪ್ರತಿದಾಳಿ ನಡೆಸಿದ್ದಾರೆ.
ಯುವತಿ ತನ್ನ ಕೈಯಲ್ಲಿ ಸೂರಜ್ ಎಂದು ಹೆಸರು ಬರೆದಿದ್ದರೂ ಹಲ್ಲೆಗೊಳಗಾದ ಸೂರಜ್‌ನ ಮೊಬೈಲ್ ಸಂಖ್ಯೆಯೂ ಆಕೆಯ ಬಳಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದರಿಂದ ಪ್ರಕರಣ ನಿಗೂಢವಾಗಿದೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.