×
Ad

ಮೈಸೂರು ವಿವಿ, ಕುವೆಂಪು ವಿವಿ ಎರಡನೇ ಹಂತಕ್ಕೆ

Update: 2017-01-10 20:42 IST

ಕೊಣಾಜೆ , ಜ.10 : ಮಂಗಳಗಂಗೋತ್ರಿಯಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಪುರುಷರ ಕೊಕ್ಕೋ ಪಂದ್ಯಾಟದಲ್ಲಿ ಮಂಗಳವಾರದಂದು ನಡೆದ ಪಂದ್ಯಾಟದಲ್ಲಿ ಮೈಸೂರು ವಿವಿಯು ತಮಿಳುನಾಡಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿವಿಯನ್ನು 17-7 ಅಂಕಗಳಿಂದ ಹಾಗೂ ಶಿವಮೊಗ್ಗದ ಕುವೆಂಪು ವಿವಿಯು ಅನಂತಪುರ ಜಿ.ಎನ್.ಟಿ.ಯು ವಿವಿಯನ್ನು 16-4 ಅಂಕಗಳಿಂದ ಮಣಿಸಿ ಎರಡನೇ ಹಂತಕ್ಕೆ ತೇರ್ಗಡೆ ಹೊಂದಿದೆ.

ಮಚಲಿಪಟ್ಟಣಂನ ಕೃಷ್ಣ ವಿವಿಯು ಕರ್ನಾಟಕದ ತುಮಕೂರು ವಿವಿಯನ್ನು 13-12 ಅಂಕಗಳಿಂದ, ಆಂದ್ರಪ್ರದೇಶದ ಆದಿಕವಿ ನನ್ನಯ್ಯ ವಿವಿಯು ಆಂದ್ರಪ್ರದೇಶದ ವಿಕ್ರಮ ಸಿಂಹಪುರಿ ವಿವಿಯನ್ನು 14-16 ಅಂಕಗಳಿಂದ ಸೋಲಿಸಿತು. ಚೆನೈನ ಅಣ್ಣ ವಿವಿಯು ಬಳ್ಳಾರಿಯ ವಿಎಸ್‌ಕೆ ವಿವಿಯನ್ನು 24-9 ಅಂಕಗಳಿಂದ, ಮದುರೈ ಕಾಮರಾಜ್ ವಿವಿಯು ಆಂದ್ರಪ್ರದೇಶದ ಶ್ರೀ ಕೃಷ್ಣ ದೇವರಾಯ ವಿವಿಯನ್ನು 13-12 ಅಂಕಗಳಿಂದ ಮಣಿಸಿತು.

ಬೆಳಗಾಂನ ರಾಣಿ ಚೆನ್ನಮ್ಮ ವಿವಿಯು ಕಾರ್ನೂಲ್‌ನ ರಾಯಲ್ ಸೀಮಾ ವಿವಿಯನ್ನು 19-5 ಅಂಕಗಳಿಂದ, ವೆಲ್ಲೂರಿನ ತಿರುವಲ್ಲೂರು ವಿವಿಯು ಶ್ರೀಕಕ್ಕುಲಮ್ ವಿವಿಯನ್ನು 18-16 ಅಂಕಗಳಿಂದ ಸೋಲಿಸಿತು. ಬೆಂಗಳೂರು ವಿವಿಯು ಕಣ್ಣೂರು ವಿವಿಯನ್ನು 12-10 ಅಂಕಗಳಿಂದ, ಕುವೆಂಪು ವಿವಿಯು ಅನಂತಪುರದ ಜಿಎನ್‌ಟಿಯು ವಿವಿಯನ್ನು 16-4 ಅಂಕಗಳಿಂದ ಮಣಿಸಿತು.


ದಾವಣಗೆರೆಯ ಕರ್ನಾಟಕ ವಿವಿಯು ಭಾರತೀದಾಸ್ ವಿವಿ ತಮಿಳುನಾಡನ್ನು 11-9 ಅಂಕಗಳಿಂದ, ವಿಶಾಖಪಟ್ಟಣಂನ ಆಂದ್ರ ವಿವಿಯು ಆಲಗಪ್ಪ ವಿವಿಯನ್ನು 16-8 ಅಂಕಗಳಿಂದ ಮಣಿಸಿತು. ಮೈಸೂರು ವಿವಿಯು ತಮಿಳುನಾಡಿನ ಫಿಸಿಕಲ್ ಎಜ್ಯುಕೇಶನ್ ಆಂಡ್ ಸ್ಪೋರ್ಟ್ ವಿವಿಯನ್ನು 11-7, ಆಂದ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿವಿಯು ಕೇರಳ ವಿವಿಯನ್ನು 17-14 ಅಂಕಗಳಿಂದ ಮಣಿಸಿತು.

ಕರ್ನಾಟಕ ವಿವಿಯು ಗುಲ್ಬರ್ಗಾ ವಿವಿಯನ್ನು 19-12 ಅಂಕಗಳಿಂದ, ಕಾಕಿನಾಡದ ಜಿಎನ್‌ಟಿಯು ವಿವಿಯು ಬೆಂಗಳೂರಿನ ಯುಎಎಸ್ ವಿವಿಯನ್ನು 10-8 ಅಂಕಗಳಿಂದ, ತಿರುಪತಿಯ ಶ್ರೀ ವೆಂಕಟೇಶ್ವರ ವಿವಿಯು ಹೈದರಬಾದ್‌ನ ಹೊಸ್ಮಾನಿಯಾ ವಿವಿಯನ್ನು 14-13 ಅಂಕಗಳಿಂದ, ಕ್ಯಾಲಿಕಟ್ ವಿವಿಯು ಚೆನೈನ ಮದ್ರಾಸು ವಿವಿಯನ್ನು 18-9 ಅಂಕಗಳಿಂದ ಮಣಿಸಿ ಎರಡನೇ ಹಂತಕ್ಕೆ ತೇರ್ಗಡೆ ಹೊಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News