ಸೋಲಾರ್ ರೂಫ್‌ಟಾಪ್ ಕಡ್ಡಾಯ: ಸಲಹೆ
ಹೊಸದಿಲ್ಲಿ, ಜ.10: ಹೊಸದಾಗಿ ನಿರ್ಮಾಣಗೊಳ್ಳಲಿರುವ ಗೃಹ ಸಮುಚ್ಚ ಯಗಳಿಗೆ ಸೋಲಾರ್ ರೂಫ್‌ಟಾಪ್‌ಗಳನ್ನು ಕಡ್ಡಾಯಗೊಳಿಸುವಂತೆ ಮತ್ತು ಪರಿಸರ ಮಾಲಿನ್ಯದಿಂದ ಕಂಗೆಟ್ಟಿರುವ ಪ್ರದೇಶಗಳಲ್ಲಿ ಡೀಸೆಲ್ ಜನರೇಟರ್‌ಗಳ ಬಳಕೆಯನ್ನು ನಿಷೇಧಿಸುವಂತೆ ವಿಜ್ಞಾನ ಮತ್ತು ಪರಿಸರ ಕೇಂದ್ರ ಸಲಹೆ ಮಾಡಿದೆ.
ಸೋಲಾರ್ ಪ್ಯಾನೆಲ್‌ಗಳ ದರದಲ್ಲಿ ಇಳಿಕೆಯಾಗಿರುವ ಕಾರಣ ಇದನ್ನು ಬಳಸುವುದು ಈಗ ಆರ್ಥಿಕವಾಗಿ ಸುಲಭ ಸಾಧ್ಯವಾಗಿದೆ. ಅಲ್ಲದೆ ಸೋಲಾರ್ ವ್ಯವಸ್ಥೆಯಿಂದ ಉತ್ಪಾದಿಸಲ್ಪಡುವ ವಿದ್ಯುಚ್ಛಕ್ತಿಯ ದರ , ಬಂಡವಾಳ ಮೊತ್ತ ಸೇರಿ, ಯೂನಿಟ್‌ಗೆ 10 ರೂ. ಆಗುತ್ತದೆ. ಆದರೆ ಡಿಸೆಲ್ ಜನರೇಟರ್‌ನಿಂದ ಉತ್ತತ್ತಿಯಾಗುವ ವಿದ್ಯುಚ್ಛಕ್ತಿಯ ದರ ಯೂನಿಟ್‌ಗೆ 27ರಿಂದ 33 ರೂ. ಆಗಿರುತ್ತದೆ ಎಂದು ತಿಳಿಸಲಾಗಿದೆ.
ಸೋಲಾರ್ ರೂಫ್‌ಟಾಪ್ ಬಳಸುವ ಗ್ರಾಹಕರ ತಿಂಗಳ ವಿದ್ಯುಚ್ಛಕ್ತಿ ಬಿಲ್ ಕೂಡಾ ಕಡಿಮೆಯಾಗುತ್ತದೆ. ಅಲ್ಲದೆ ಹೆಚ್ಚುವರಿ ಸೋಲಾರ್ ವಿದ್ಯುತ್ ಅನ್ನು ವಿದ್ಯುತ್ ಜಾಲಕ್ಕೆ ರಫ್ತು ಮಾಡಲು ಸಾಧ್ಯ.
ದಿಲ್ಲಿ, ಹರ್ಯಾಣ, ಉತ್ತರಪ್ರದೇಶ ಮತ್ತು ರಾಜಸ್ತಾನದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಡೀಸೆಲ್ ಜನರೇಟರ್‌ನ ಗಾತ್ರಕ್ಕೂ ಅದು ಉತ್ಪಾದಿಸುವ ವಿದ್ಯುತ್‌ಗೂ ಯಾವುದೇ ಸಂಬಂಧವಿಲ್ಲ. ಆದರೆ ಕೆಲವೊಂದು ಕಡೆ ಭಾರೀ ಗಾತ್ರದ ಜನರೇಟರ್‌ಗಳು ‘ಪ್ರತಿಷ್ಠೆ’ಯ ಸಂಕೇತ ಎನಿಸಿಕೊಂಡಿದೆ ಎಂದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.