ಕೋಟುಮಲ ಬಾಪು ಉಸ್ತಾದ್ ನಿಧನ : ಬೆಳ್ಳಾರೆ ಮಸೀದಿ , ಸಂಘಸಂಸ್ಥೆಗಳು ಸಂತಾಪ
ಬೆಳ್ಳಾರೆ, ಜ.10 : ಸಮಸ್ತ ಉಲಮಾ ಒಕ್ಕೂಟದ ಕಾರ್ಯದರ್ಶಿ ,ಕೇರಳ ಹಜ್ಜ್ ಕಮಿಟಿಯ ಚಯರ್ಮೇನ್ ಹಾಗೂ ರಹ್ಮಾನಿಯ ಅರೇಬಿಕ್ ಕಾಲೇಜಿನ ಪ್ರಾಂಶುಪಾಲರಾದ ಶೈಖುನಾ ಕೋಟುಮಲ ಬಾಪು ಮುಸ್ಲಿಯಾರ್( 68) ರ ನಿಧನಕ್ಕೆ ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಕೆ ಎಮ್ ಮಹಮ್ಮದ್ ಹಾಜಿ ಬೆಳ್ಳಾರೆ ,ಯು ಹೆಚ್ ಅಬೂಬಕ್ಕರ್ ,ಇಬ್ರಾಹೀಂ ಕೆ ,ಸಮಸ್ತ ಸುನ್ನಿಮಹಲ್ ಫೇಡರೇಶನ್ ಬೆಳ್ಳಾರೆ ಅಧ್ಯಕ್ಷ ಕೆ ಎ ಬಶೀರ್ ,ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಬೆಳ್ಳಾರೆ ಅಧ್ಯಕ್ಷ ಬಿ ಎ ಬಶೀರ್ , ಅನ್ಸಾರುದ್ದೀನ್ ರಿಫಾಯಿಯಾ ದಫ್ ಕಮಿಟಿ ಅಧ್ಯಕ್ಷ ಆಶಿರ್ ಎ ಬಿ ಬೆಳ್ಳಾರೆ ,ಎಸ್ .ವೈ .ಎಸ್ ಬೆಳ್ಳಾರೆ ಅಧ್ಯಕ್ಷ ಹಾಜಿ ಕೆ ಮಮ್ಮಾಲಿ,ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ , ವಲಯಾಧ್ಯಕ್ಷರಾದ ಜಮಾಲುದ್ದೀನ್ ಕೆ ಎಸ್ , ಹಿದಾಯ ಎಜುಕೇಶನಲ್ &ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಕಮಿಟಿಯ ಸರ್ವ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ .
ಶೈಖುನ ಕೋಟುಮಲ ಬಾಪು ಉಸ್ತಾದರ ಮಯ್ಯತ್ ನಮಾಝಿಗೆ ಹಾಗೂ ಮಗ್ಪಿರತಿಗಾಗಿ ವಿಶೇಷ ಪ್ರಾರ್ಥನೆ ಮಾಡಬೇಕಾಗಿ ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಖತೀಬರಾದ ಬಹು. ತಾಜುದ್ದೀನ್ ರಹ್ಮಾನಿ ವಿನಂತಿಸಿದ್ದಾರೆ .