×
Ad

ಆಳ್ವಾಸ್ ಹೋಮಿಯೋಪಥಿ ಆಸ್ಪತ್ರೆಯಿಂದ ಪ್ರೆಸ್‌ಕ್ಲಬ್ ಕುಟುಂಬಸ್ಥರಿಗೆ ಹೆಲ್ತ್ ಕಾರ್ಡ್ ವಿತರಣೆ

Update: 2017-01-10 22:12 IST

ಮೂಡುಬಿದಿರೆ, ಜ.10 : ಮಿಜಾರಿನಲ್ಲಿರುವ ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವತಿಯಿಂದ ಮೂಡುಬಿದಿರೆ ಪ್ರೆಸ್‌ಕ್ಲಬ್‌ನ ಸದಸ್ಯರಿಗೆ ಹಾಗೂ ಕುಟುಂಬದವರಿಗೆ ಹೆಲ್ತ್ ಕಾರ್ಡ್ ವಿತರಣಾ ಕಾರ್ಯಕ್ರಮ ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.

ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ರಾಜ್ ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್ ಅಧ್ಯಕ್ಷ ಧನಂಜಯ ಮೂಡುಬಿದಿರೆ ಅವರಿಗೆ ಹೆಲ್ತ್ ಕಾರ್ಡ್ ಅನ್ನು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಯಾವುದೇ ರೀತಿಯ ಅಡ್ಡ ಪರಿಣಾಮವಿಲ್ಲದೆ, ಸರಳವಾಗಿ ಅತ್ಯಂತ ಪರಿಣಾಮಕಾರಿಯಾಗಿ ಚಿಕಿತ್ಸೆಯನ್ನು ಹೋಮಿಯೋಪತಿಯಿಂದ ಪಡೆಯಲು ಸಾಧ್ಯ. ಜನಸಾಮಾನ್ಯರಿಗೆ ಹೋಮಿಯೋಪತಿ ಚಿಕಿತ್ಸೆಯನ್ನು ತಲುಪಿಸಲು ಆಳ್ವಾಸ್ ಹೋಮಿಯೋಪಥಿ ಆಸ್ಪತ್ರೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಡಾ. ಪ್ರಜ್ಞಾ ಆಳ್ವ ಹೆಲ್ತ್ ಕಾರ್ಡ್ ಬಗ್ಗೆ ಮಾಹಿತಿ ನೀಡಿ, ಹೆಲ್ತ್ ಕಾರ್ಡ್ ಪಡೆದವರು ಮಿಜಾರಿನಲ್ಲಿರುವ ಆಳ್ವಾಸ್ ಹೋಮಿಯೋಪಥಿ ಆಸ್ಪತ್ರೆ ಹಾಗೂಮೂಡುಬಿದಿರೆಯಲ್ಲಿರುವ ಆಳ್ವಾಸ್ ಹೆಲ್ತ್ ಸೆಂಟರ್‌ನಲ್ಲಿ ಹೋಮಿಯೋಪತಿ ಸೇವೆಯನ್ನು ಪಡೆಯಬಹುದು ಎಂದರು.

ಇಂಟರ್ನ್‌ಗಳಾದ ಡಾ.ಪೂಜಾ, ಡಾ.ಕೀರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News