ಸಿಐಟಿಯು ಅದೃಷ್ಟ ಬಹುಮಾನ ಯೋಜನೆ ಡ್ರಾ
Update: 2017-01-10 22:17 IST
ಕುಂದಾಪುರ, ಜ.10: ಕುಂದಾಪುರ ತಾಲೂಕು ಆಟೋ ಮತ್ತು ವಾಹನ ಚಾಲಕರ ಸಂಘದ(ಸಿಐಟಿಯು) ಅದೃಷ್ಟ ಬಹುಮಾನ ಯೋಜನೆಯ ಡ್ರಾ ಕಾರ್ಯಕ್ರಮ ರವಿವಾರ ಕುಂದಾಪುರ ಶಾಸ್ತ್ರಿ ಸರ್ಕಲ್‌ನಲ್ಲಿ ನಡೆಯಿತು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಇಂಟಕ್ ಸಂಘ ಟನೆಯ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಪುರಸಭೆ ಸದಸ್ಯ ವಿಜಯ ಎಸ್.ಪೂಜಾರಿ, ಹಂಗಳೂರು ಗ್ರಾಪಂ ಉಪಾಧ್ಯಕ್ಷ ಸ್ಟೀವನ್ ಮುಖ್ಯ ಅತಿಥಿಗಳಾಗಿದ್ದರು. ಬಂಪರ್ ಬಹುಮಾನದ ಅದೃಷ್ಟ ಮಲ್ಲಿಕಾರ್ಜುನ ಬಸ್ರೂರುಗೆ ಒಲಿಯಿತು.
ಸಂಘದ ಅಧ್ಯಕ್ಷ ಲಕ್ಷ್ಮಣ ಬರೆಕಟ್ಟು ಅಧ್ಯಕ್ಷತೆ ವಹಿಸಿದ್ದರು.
ಗೌರವಾಧ್ಯಕ್ಷ ಎಚ್.ಕರುಣಾಕರ, ಚಂದ್ರ ವಿ. ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್.ವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸಂಘಟನಾ ಕಾರ್ಯದರ್ಶಿ ರಾಜ ದೇವಾಡಿಗ ವಂದಿಸಿದರು.