ಅಗ್ನಿ ದುರಂತ : ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿದ ಶಾಸಕ ಶಿವರಾಮ ಹೆಬ್ಬಾರ
Update: 2017-01-10 22:57 IST
ಮುಂಡಗೋಡ, ಜ.10 : ಬೆಂಕಿಯಿಂದ ಹಾನಿಯಾದ ಕುಟುಂಬಗಳಿಗೆ 15 ದಿನಗಳವರೆಗೆ ಆಹಾರ ಸಾಮಗ್ರಿಗಳನ್ನು ಒದಗಿಸುವಂತೆ ಹಾಗೂ ಹಾನಿಗೋಳಗಾದ ಸಾಮಗ್ರಿಗಳ ಪಟ್ಟಿಮಾಡಿ ತಮಗೆ ನೀಡಬೇಕೆಂದು ತಹಶೀಲ್ದಾರ ಗೆ ಶಾಸಕ ಶಿವರಾಮ ಹೆಬ್ಬಾರ ಸೂಚಿಸಿದರು.
ಅವರು ಮೂರು ದಿನಗಳ ಹಿಂದೆ ತಾಲೂಕಿನ ವಿವಿಧೆಡೆ ಬೆಂಕಿ ತಗುಲಿ ಹಾನಿಗೊಳಗಾದ ಮನೆಗಳಿಗೆ ಸಾಂತ್ವನ ಹೇಳಲು ಆಗಮಿಸಿದ್ದರು.
ಕಾತೂರ ಪಂಚಾಯತಿ ವ್ಯಾಪ್ತಿಯ ಸಿಂಗ್ನಳ್ಳಿ ಗ್ರಾಮದಲ್ಲಿ ಒಂದೆ ಕುಟುಂಬದ ನಾಲ್ಕು ಮನೆಗಳು ಶನಿವಾರ ರಾತ್ರಿ ಬೆಂಕಿಗೆ ಆಹುತಿಯಾಗಿದ್ದವು . ಅದೇ ರೀತಿ ಸೋಮವಾರ ಪಟ್ಟಣದ ನೆಹರು ನಗರದಲ್ಲಿ ಮನೆಯೊಂದಕ್ಕೆ ಬೆಂಕಿ ತಗುಲಿ ಆಪಾರ ಹಾನಿಯಾಗಿತ್ತು.
ಆಹುತಿಯಾಗಿರುವ 5 ಮನೆಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು