×
Ad

ಬಂಟ್ವಾಳ : ಈದ್ ಫೆಸ್ಟ್ 2017

Update: 2017-01-10 23:21 IST

ಬಂಟ್ವಾಳ, ಜ. 10: ಅಲ್ ಖಾದಿಸಾ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್ ಕಾವಳಕಟ್ಟೆ ವಿದ್ಯಾರ್ಥಿಗಳ ಈದ್ ಫೆಸ್ಟ್ 2017 ಹಾಗೂ ಗೌಸುಲ್ ವರಾ ಕಾನ್ಫರೆನ್ಸ್ ಅಲ್ ಖಾದಿಸಾ ಕ್ಯಾಂಪನ್‌ನಲ್ಲಿ ಎರಡು ದಿವಸಗಳ ಕಾರ್ಯಕ್ರಮ ನಡೆಯಿತು.

ಎಜ್ಯು ಫೆಸ್ಟ್‌ನ 40 ಸ್ಪರ್ಧೆಗಳಲ್ಲಿ ಸಂಸ್ಥೆಯಲ್ಲಿ ಕಲಿಯುವ 13 ಜಿಲ್ಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ದುಲ್ ದುಲ್ ಮತ್ತು ಹುದ್ ಹುದ್ ಎಂಬ ಎರಡು ತಂಡಗಳು ಭಾಗವಹಿಸಿ ದುಲ್ ದುಲ್ ತಂಡ ಪ್ರಶಸ್ತಿಯನ್ನು ಪಡೆಯಿತು.

ಮುಶರ್ರಫ್ ಅಹ್ಮದ್ ಸಕಲೇಶಪುರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಪಡೆದರು.

ಗೌಸುಲ್ ವರಾಹ್ ಕಾನ್ಫರೆನ್ಸ್‌ನಲ್ಲಿ ಸಂಸ್ಥೆಯ ಶಿಲ್ಪಿ ಡಾ. ಫಾಝಿಲ್ ರಝ್ವಿ ಹಝ್ರತ್ ನೇತೃತ್ವ ನೀಡಿದರು.

ಮುಹಮ್ಮದ್ ರಫೀಖ್ ಸಅದಿ ದೇಲಂಬಾಡಿ ಮುಖ್ಯ ಪ್ರಭಾಷಣ ಮಾಡಿದರು.

ಸಯ್ಯದ್ ಅಬ್ದುಸ್ಸಲಾಂ ತಂಙಳ್ ಪೂಂಜಾಲಕಟ್ಟೆ, ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಬಡಕಬೈಲು, ದಮಾಮ್ ಸಮಿತಿ ಸದಸ್ಯ ಹನೀಫ್ ಹಾಜಿ ಮಂಜನಾಡಿ, ಅಬೂಬಕರ್ ಕೋಡಿ, ಬಶೀರ್ ಉಸ್ತಾದ್ ಮಜೂರು, ಉಮರ್ ತ್ವಾಯಿಫ್, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಾಫಿಳ್ ಸುಫಿಯಾನ್ ಸಖಾಫಿ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News