ಶಿರ್ವ: ನಾಳೆ, ವಿವಿ, ಮಟ್ಟದ, ವಾಲಿಬಾಲ್, ಟೂರ್ನಿ,
Update: 2017-01-11 00:17 IST
ಶಿರ್ವ, ಜ.10: ಇಲ್ಲಿನ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಸಂಸ್ಥಾಪಕ, ವಿಜಯ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ದಿ.ಮುಲ್ಕಿ ಸುಂದರ್ ರಾಮ್ ಶೆಟ್ಟಿ ಸ್ಮರಣಾರ್ಥ ಮಂಗಳೂರು ವಿವಿ ಮಟ್ಟದ 36ನೆ ವರ್ಷದ ಪುರುಷ ಮತ್ತು ಮಹಿಳೆಯರ ವಾಲಿಬಾಲ್ ಟೂರ್ನಿ ಜ.12ರಂದು ಕಾಲೇಜಿನಲ್ಲಿ ನಡೆಯಲಿದೆ.
ವಿಜಯ ಬ್ಯಾಂಕ್ ಹಾಗೂ ಎಂ.ಎಸ್.ಆರ್.ಎಸ್.ಕಾಲೇಜು ಹಳೆ ವಿದ್ಯಾರ್ಥಿ ಸಂಘ ಮುಂಬೈ ಇದರ ಜಂಟಿ ಸಹಯೋಗದಲ್ಲಿ ವಾಲಿಬಾಲ್‌ಟೂರ್ನಿ ನಡೆಯಲಿದೆ. ಬೆಳಗ್ಗೆ 9:30ಕ್ಕೆ ಉದ್ಘಾಟನೆ ನೆರವೇರಲಿರುವುದು. ಸಂಜೆ 5ಕ್ಕೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.