×
Ad

ಬ್ಯಾರಿ ನಿಕಾಹ್ ಹೆಲ್ಪ್‌ಲೈನ್ ಸಮಾಲೋಚನಾ ಸಭೆ

Update: 2017-01-11 12:29 IST

ಪಡುಬಿದ್ರೆ, ಜ.11: ಸಾಮಾಜಿಕ ಮಾದ್ಯಮಗಳ ಮೂಲಕ ಮುಸ್ಲಿಮ್ ಸಮುದಾಯದ ಸಮಾಜ ಸೇವೆಯ ಮೂಲಕ ವರದಕ್ಷಿಣೆರಹಿತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿರುವ ‘ಬ್ಯಾರಿ ನಿಕಾಹ್ ಹೆಲ್ಪ್‌ಲೈನ್’ ಕರಾವಳಿ ಜಿಲ್ಲೆಯ ಹಲವು ಬಾಗದ ಪ್ರಮುಖ ಜಮಾತ್ ನ ಸಂದರ್ಶನದೊಂದಿಗೆ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಇದರಂಗವಾಗಿ ವಿಚಾರಗೋಷ್ಠಿಯೊಂದು ಇತ್ತೀಚೆಗೆ ಪಡುಬಿದ್ರೆಯ ಹೊಟೇಲ್ ನವರಂಗ್‌ನ ಸಭಾಂಗಣದಲ್ಲಿ ನಡೆಯಿತು.
ಸಂಘಟನೆಯ ಕಾರ್ಯದರ್ಶಿ ಮಜೀದ್ ಅಹ್ಸನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
 
 ಅಫ್ತಾಬ್ ಬಂದರ್ ಬ್ಯಾರಿ ನಿಕಾಹ್ ಹೆಲ್ಪ್‌ಲೈನ್ ನ ರೂಪುರೇಷೆ ಹಾಗು ಕಾರ್ಯವೈಖರಿಯನ್ನು ವಿವರಿಸಿ ವಿಷಯ ಮಂಡಿಸಿದರು. ಮುಖ್ಯ ಭಾಷಣ ಮಾಡಿದ ಎಂ.ಹೆಚ್.ಎಂ.ಖಲಂದರ್ ರಝ್ವಿ ವರದಕ್ಷಿಣೆ ರಹಿತ ಮದುವೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಸಮೀರುದ್ದೀನ್ ಪಡುಬೆಟ್ಟು ಸ್ವಾಗತಿಸಿದರು. ಇಸ್ಮಾಯೀಲ್ ಕಾನ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News