×
Ad

ಮೈಸೂರು ವಿವಿ, ಕುವೆಂಪು ವಿವಿ ಕ್ವಾರ್ಟರ್ ಫೈನಲ್ ಪ್ರವೇಶ

Update: 2017-01-11 18:48 IST

ಕೊಣಾಜೆ, ಜ.11 : ಮಂಗಳಗಂಗೋತ್ರಿಯಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಪುರುಷರ ಖೋ ಖೋ ಪಂದ್ಯಾಟದಲ್ಲಿ ದ್ವಿತೀಯ ದಿನವಾದ ಬುಧವಾರ ಮಧುರೈ ಕಾಮರಾಜ್ ವಿವಿಯನ್ನು ಆಂಧ್ರ ಪ್ರದೇಶದ ಆದಿಕವಿ ನನ್ನಯ್ಯ ವಿವಿ, ಶಿವಮೊಗ್ಗ ಕುವೆಂಪು ವಿವಿ, ಮೈಸೂರು ವಿವಿ, ಕ್ಯಾಲಿಕಟ್ ವಿವಿ ಕ್ವಾರ್ಟರ್ ಪೈನಲ್ ಪ್ರವೇಶ ಪಡೆಯಿತು.
   

ಪ್ರಿಕ್ವಾರ್ಟರ್ ಪಂದ್ಯಾಟದಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು ಬೆಳಗಾವಿಯ ರಾಣಿಚೆನ್ನಮ್ಮ ವಿವಿಯನ್ನು 12-9 ಪಾಯಿಂಟ್‌ಗಳಿಂದ ಮಣಿಸಿತು. ಮೈಸೂರು ವಿವಿಯು ದಾವಣಗೆರೆ ವಿವಿಯನ್ನು 14-13 ಅಂಕಗಳಿಂದ ಮಣಿಸಿ, ಕ್ಯಾಲಿಕಟ್ ವಿವಿಯು ದಾರವಾಡದ ಕರ್ನಾಟಕ ವಿವಿಯನ್ನು 14-12 ಪಾಯಿಂಟ್‌ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆ ಹೊಂದಿತು.  

ಇದಕ್ಕಿಂತ ಮುನ್ನ ನಡೆದ ಮೂರನೇ ಹಂತದ ಖೋಖೋ ಪಂದ್ಯಾಟದಲ್ಲಿ ಆಂಧ್ರಪ್ರದೇಶದ ನನ್ನಯ್ಯ ವಿವಿಯು ಮಚಲೀಪಟ್ಟಣಂನ ಕೃಷ್ಣ ವಿವಿಯನ್ನು 10-8 ಪಾಯಿಂಟ್‌ಗಳಿಂದ ಪರಾಭವಗೊಳಿಸಿತು. ಬಳಿಕ ನಡೆದ ಮದುರೈ ಕಾಮರಾಜ್ ವಿವಿಯು ಚೆನ್ನೈನ ಅಣ್ಣಾ ವಿವಿಯನ್ನು 17-15 ಅಂತರಗಳಿಂದ ರೋಚಕವಾಗಿ ಜಯಗಳಿಸಿತು.

ಬೆಳಗಾವಿಯ ರಾಣಿಚೆನ್ನಮ್ಮ ವಿವಿಯು ವೆಳ್ಳೂರಿನ ತಿರುವಲ್ಲುವಾರ್ ವಿವಿಯನ್ನು 10-8 ಅಂಕಗಳಿಂದ ಮಣಿಸಿತು. ಶಿವಮೊಗ್ಗದ ಕುವೆಂಪು ವಿವಿಯು ಬೆಂಗಳೂರು ವಿವಿಯನ್ನು 13-9 ಅಂಕಗಳಿಂದ ಪರಾಭವಗೊಳಿಸಿ ಪ್ರಿಕ್ವಾರ್ಟರ್‌ಪೈನಲ್‌ಗೆ ತೇರ್ಗಡೆ ಹೊಂದಿತು.

ಕರ್ನಾಟಕದ ದಾವಣಗೆರೆ ವಿವಿಯು ವಿಶಾಖಪಟ್ಟಣಂನ ಆಂಧ್ರ ವಿವಿಯನ್ನು 11-10 ಅಂಕಗಳಿಂದ ಅತ್ಯಂತ ರೋಚಕಕಾರಿ ಪಂದ್ಯಾಟದಲ್ಲಿ ಮಣಿಸಿತು. ಮೈಸೂರು ವಿವಿಯು ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿವಿಯನ್ನು 25-14 ಅಂತರಗಳಿಂದ ನಿರಾಯಾಸವಾಗಿ ಪರಾಭವಗೊಳಿಸಿತು. ಧಾರವಾಡದ ಕರ್ನಾಟಕ ವಿವಿ ಯು ಕಕ್ಕಿನಾಡದ ಜೆಎನ್‌ಟಿಯು ವಿವಿಯನ್ನು 14-12 ಅಂತರಗಳಿಂದ ಸೋಲಿಸಿತು. ಕ್ಯಾಲಿಕಟ್ ವಿವಿಯು ತಿರುಪತಿಯ ವೆಂಕಟೇಶ್ವರ ವಿವಿಯನ್ನು 11-17 ಪಾಯಿಂಟ್‌ಗಳಿಂದ ಪರಾಭವಗೊಳಿಸಿತ್ತು.

ಗುರುವಾರ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ಮಂಗಳೂರು ವಿವಿ ಹಾಗೂ ಆದಿಕವಿ ವಿವಿ, ಕುವೆಂಪು ವಿವಿಯು ಪಾಂಡಿಚೇರಿ ವಿವಿಯನ್ನು, ಮೈಸೂರು ವಿವಿಯು ತಮಿಳುನಾಡಿನ ಭಾರತೀಯರ ವಿವಿಯನ್ನು, ಅಣ್ಣಾಮಲೈ ವಿವಿ ಹಾಗೂ ಕ್ಯಾಲಿಕಟ್ ವಿವಿಗಳ ನಡುವೆ ಕಾದಾಟ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News