×
Ad

12 ಕ್ಕೂ ಅಧಿಕ ಪ್ರಕರಣಗಳ ಆರೋಪಿ ಯುವಕ ಕೊನೆಗೂ ಪೊಲೀಸ್ ಬಲೆಗೆ

Update: 2017-01-11 19:30 IST

ಕಾಸರಗೋಡು , ಜ.11  : ಕೊಲೆ ಸೇರಿದಂತೆ 12  ಕ್ಕೂ ಅಧಿಕ ಪ್ರಕರಣಗಳ ಆರೋಪಿಯೋರ್ವನನ್ನು  ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ .

ಬಂಧಿತನನ್ನು  ಕೂಡ್ಲು ಬಟ್ಟ೦ಪಾರೆಯ ಮಹೇಶ್ ( 20) ಎಂದು ಗುರುತಿಸಲಾಗಿದೆ.

ಈತನ ವಿರುದ್ಧ ನಾಲ್ಕು ವಾರಂಟ್ ಪ್ರಕರಣಗಳಿದ್ದವು.  ಆಬಿದ್ ಕೊಲೆ ಪ್ರಕರಣದ ಆರೋಪಿಯಾಗಿರುವ ಈತ 2014 ರ ಫೆಬ್ರವರಿ 10ರಂದು ಅಡ್ಕತ್ತಬೈಲ್ ನಲ್ಲಿ  ಯೋಗೀಶ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ , 2012 ರ   ಮಾರ್ಚ್ 23ರಂದು ಕಾಸರಗೋಡು ಸರಕಾರಿ ಹೈಯರ್ ಸೆಕಂಡರಿ ಶಾಲಾ ಬಳಿ  ವಿದ್ಯಾರ್ಥಿ ಉಳಿಯತ್ತಡ್ಕದ ಮುನಾಶೀರ್ ನ  ಇರಿದ ಪ್ರಕರಣ ಈತನ ಮೇಲೆ ದಾಖಲಾಗಿದ್ದವು.

2015 ಜುಲೈಯಲ್ಲಿ ಪೊಲೀಸರ  ಹಲ್ಲೆ ಮತ್ತು  ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದ ಆರೋಪಿಯಾಗಿರುವ ಈತನ  ವಿರುದ್ಧ  ವಾರಂಟ್ ಹೊರಡಿಸಲಾಗಿತ್ತು.

ಕೃತ್ಯದ ಬಳಿಕ ತಲೆಮರೆಸಿಕೊಳ್ಳುತ್ತಿದ್ದ ಈತ ಪೊಲೀಸರಿಗೆ ಸವಾಲಾಗಿದ್ದನು. ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದ  ಈತ ಕಾಸರಗೋಡಿಗೆ ಆಗಮಿಸಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News