ಜನವರಿ 13 ರಂದು ಮೆಲ್ಕಾರ್‌ನಲ್ಲಿ ಇಸ್ಲಾಮಿಕ್ ಫೈನಾನ್ಸ್ ಮತ್ತು ಬ್ಯಾಂಕಿಂಗ್ ಕುರಿತು ಸಂವಾದ
Update: 2017-01-11 19:48 IST
ವಿಟ್ಲ , ಜ.11 : ಬಂಟ್ವಾಳ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇದರ ಆಶ್ರಯದಲ್ಲಿ ಇಸ್ಲಾಮಿಕ್ ಫೈನಾನ್ಸ್ ಮತ್ತು ಬ್ಯಾಂಕಿಂಗ್ ಕುರಿತು ಸಂವಾದ ಕಾರ್ಯಕ್ರಮವು ಜನವರಿ 13 ರಂದು ಸಂಜೆ 4 ಗಂಟೆಗೆ ಪಾಣೆಮಂಗಳೂರು-ಮೆಲ್ಕಾರ್‌ನ ಬಿರ್ವ ಸೆಂಟರ್ ಹಾಲ್‌ನಲ್ಲಿ ನಡೆಯಲಿದೆ.
ದ.ಕ. ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ ಕೆಪಿಎಸ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಡುಪಿ ಜನಸೇವಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷ ಹುಸೈನ್ ಕೋಡಿಬೆಂಗ್ರೆ, ಕೇರಳ-ಶಾಂತಪುರಂನ ಇಸ್ಲಾಮಿಕ್ ಹಣಕಾಸು ವಿಭಾಗದ ಕಲಾ ಮತ್ತು ವಿಜ್ಞಾನ ವಿದ್ಯಾಲಯದ ಮುಖ್ಯಸ್ಥ ಮುಹಮ್ಮದ್ ಶೌಕತ್ ಅಲಿ ಉಪನ್ಯಾಸಕ ಸಯ್ಯಿದ್ ರಮ್ಜಾನ್ ಸಿ.ಪಿ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಬಂಟ್ವಾಳ ಅಲ್ಪಸಂಖ್ಯಾತ ಅಲ್ಪಸಂಖ್ಯಾತ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಖಲೀಲುಲ್ಲಾ ಬಂಟ್ವಾಳ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.