×
Ad

ಈ ವಾರ ಆಗಸದಲ್ಲಿ ಹೊಳೆಯುವ ಶುಕ್ರ

Update: 2017-01-11 20:15 IST

ಉಡುಪಿ, ಜ.11: ಈ ವಾರ ಸಂಜೆ ಪಶ್ಚಿಮ ಆಕಾಶದಲ್ಲಿ ಶುಕ್ರಗ್ರಹ ಹೆಚ್ಚಿನ ಕಾಂತಿಯಿಂದ ಹೊಳೆಯಲಿದೆ. ಜ.12, ಶುಕ್ರನ ಪೂರ್ವೋನ್ನತಿ. ಈ ದಿನ ಶುಕ್ರನು ಪಶ್ಚಿಮ ದಿಗಂತದಿಂದ ಅತ್ಯಂತ ಎತ್ತರದಲ್ಲಿ ಅಂದರೆ 470 ಯಲ್ಲಿ ಕಾಣಿಸಲಿದ್ದಾನೆ. ಹೀಗಾಗಿ ಸುಮಾರು ಮೂರು ತಿಂಗಳಿಂದ ಪಶ್ಚಿಮ ಆಕಾಶದಲ್ಲಿ ಹೊಳೆಯುತ್ತಿರುವ ಶುಕ್ರ ,  ಈ ವಾರ ಅತಿಹೆಚ್ಚಿನ ಕಾಂತಿಯಿಂದ ಶೋಭಿಸಲಿದ್ದು, ಕಳೆದ ಐದು ವರ್ಷಗಳಲ್ಲಿ ಇಷ್ಟು ಪ್ರಕಾಶಮಾನವಾಗಿ ಕಾಣಿಸುವುದು ಇದೇ ಪ್ರಥಮ. ಮಾರ್ಚ್ 25ರವರೆಗೂ ಶುಕ್ರಗ್ರಹ ಸಂಜೆ ಪಶ್ಚಿಮ ಆಕಾಶದಲ್ಲಿ ಗೋಚರಿಸಿದರೂ ಹಂತ ಹಂತವಾಗಿ ಕೆಳಗಿಳಿಯಲಿದ್ದು ಕ್ರಮೇಣ ಕಣ್ಮರೆಯಾಗಲಿದ್ದಾನೆ.

ಎ.15ರ ನಂತರ ಡಿಸೆಂಬರ್‌ವರೆಗೆ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಕಾಣಿಸಲಿದ್ದು, ಜೂನ್ 3ರಂದು 460ಎತ್ತರದಲ್ಲಿ ಕಾಣಿಸುತ್ತಾನೆ. ಇದನ್ನು ಪಶ್ಚಿಮೋನ್ನತಿ ಎನ್ನುತ್ತಾರೆ. ಶುಕ್ರ ಒಂದು ಗ್ರಹವೋ, ನಕ್ಷತ್ರವೋ? ನಿರ್ಧರಿಸಲು ದೂರದರ್ಶಕ ಅಗತ್ಯ. ಈಗ ದೂರದರ್ಶಕದಲ್ಲಿ ಶುಕ್ರ ಗ್ರಹ ಸಪ್ತಮಿಯ ಅರ್ಧಚಂದ್ರನಂತೆ ಕಾಣಿಸಲಿದ್ದಾನೆ.

ಜ.12, ಜ.16 ಮತ್ತು 17ರಂದು ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಆಶ್ರಯದಲ್ಲಿ ಆಕಾಶ ವೀಕ್ಷಣೆ ನಡೆಯಲಿದೆ.

ಶುಕ್ರ ಒಂದು ಗ್ರಹವೋ, ನಕ್ಷತ್ರವೋ?

ನಿರ್ಧರಿಸಲು ದೂರದರ್ಶಕ ಅಗತ್ಯ. ಈಗ ದೂರದರ್ಶಕದಲ್ಲಿ ಶುಕ್ರಗ್ರಹ ಸಪ್ತಮಿಯ ಅರ್ಧ ಚಂದ್ರನಂತೆ ಕಾಣಿಸಲಿದ್ದಾನೆ.  ಜ.12 , ಜ.16 ಮತ್ತು 17ರಂದು ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರವಿಭಾಗದ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಆಶ್ರಯದಲ್ಲಿ ಆಕಾಶ ವೀಕ್ಷಣೆ ನಡೆಯಲಿದೆ.

ಬುಧಗ್ರಹ:

ಬುಧಗ್ರಹ ಜ.19ರಂದು ಬೆಳಗಿನ ಜಾವ ಪೂರ್ವಾಕಾಶದಲ್ಲಿ ಕಾಣಿಸಲಿದೆ. ವರ್ಷದಲ್ಲಿ ಮೂರು ಬಾರಿ ಪೂರ್ವಾಕಾಶದಲ್ಲಿ (ಬೆಳಗಿನ ಜಾವ), ಹಾಗೆಯೇ 3 ಬಾರಿ ಪಶ್ಚಿಮ ಆಕಾಶದಲ್ಲಿ (ಸಂಜೆಯಾದೊಡನೆ) ಬರೇ 45 ನಿಮಿಷ,ಹಾಗೂ ಕೆಲ ದಿನಗಳು ಮಾತ್ರ ಬುಧ ಗ್ರಹ ಕಣ್ಣಿಗೆ ಗೋಚರವಾಗಲಿದೆ ಎಂದು ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News