×
Ad

ರಥಬೀದಿ ವ್ಯಾಪಾರ ಮುಕ್ತಗೊಳಿಸಲು ಸಹಕಾರ: ಪೇಜಾವರ ಶ್ರೀ

Update: 2017-01-11 20:48 IST

ಉಡುಪಿ, ಜ.11: ಉಡುಪಿ ಶ್ರೀಕೃಷ್ಣಮಠದ ರಥಬೀದಿಯನ್ನು ವಾಹನ ಮುಕ್ತಗೊಳಿಸಿದಂತೆ ವ್ಯಾಪಾರ ಮುಕ್ತಗೊಳಿಸಲು ಸರಕಾರ ಹಾಗೂ ಸಾರ್ವಜನಿಕರ ಸಹಕಾರದಿಂದ ವಿಶೇಷ ಪ್ರಯತ್ನ ಮಾಡಲಾಗುವುದು ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಉಡುಪಿ ಶ್ರಿಕೃಷ್ಣ ಮಠದ ಅನ್ನಧರ್ಮ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಮಠದ ಆಸುಪಾಸಿನಲ್ಲಿ ನಿರಂತರ ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ನಾಗರಿಕ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಶ್ರೀಕೃಷ್ಣ ಮಠ, ಪಾರ್ಕಿಂಗ್ ಪ್ರದೇಶ ಹಾಗೂ ಅಷ್ಠ ಮಠದ ಪರಿಸರವನ್ನು ಸ್ವಚ್ಛಗೊಳಿಸುವ ಬಗ್ಗೆ ಯೋಜನೆ ರೂಪಿಸಿ ವರದಿ ನೀಡಿದರೆ ಮಠದ ಸಿಬ್ಬಂದಿ ಗಳನ್ನು ನೇಮಕ ಮಾಡಿ ಶುಚಿಗೊಳಿಸಲಾಗುವುದು. ಆದರೆ ರಥಬೀದಿಯನ್ನು ಸಾರ್ವಜನಿಕರು, ವರ್ತಕರೆಲ್ಲ ಸೇರಿ ಮಾಡಬೇಕಾಗಿದೆ ಎಂದರು.

ಶೀರೂರು ಮಠಾಧೀಶ ಶ್ರೀಲಕ್ಷ್ಮಿವರತೀರ್ಥ ಸ್ವಾಮೀಜಿ ಮಾತನಾಡಿ, ರಥ ಬೀದಿಯಲ್ಲಿರುವ ಯಾವುದೇ ಅಂಗಡಿಗಳಿಗೆ ಬಾಡಿಗೆ ಇಲ್ಲ. ಇವರಲ್ಲಿ ಹೆಚ್ಚಿ ನವರು ಜಾಗವನ್ನು ಆಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇವರೆಲ್ಲ ರಥಬೀದಿಗೂ ತಮಗೂ ಯಾವುದೇ ಸಂಬಂಧ ಇಲ್ಲದಂತೆ ಇದ್ದಾರೆ. ಆದು ದರಿಂದ ಇವರಿಗೆ ಕಡಿವಾಣ ಹಾಕುವ ಕೆಲಸವನ್ನು ಅಷ್ಠಮಠಾಧೀಶರು ಮಾಡಬೇಕಾಗಿದೆ ಎಂದು ಹೇಳಿದರು.
ರಥಬೀದಿಯನ್ನು ವಾಹನ ಮುಕ್ತ ಮಾಡಿರುವಂತೆ ವ್ಯಾಪಾರ ಮುಕ್ತವನ್ನಾ ಗಿಯೂ ಮಾಡಬೇಕು. ಪೇಜಾವರಶ್ರೀಗಳು ಈ ಬಗ್ಗೆ ಸಂಕಲ್ಪ ಮಾಡಿ ಪರ್ಯಾಯ ಅವಧಿ ಮುಗಿಯುವ ಮೊದಲು ಮಾಡಬೇಕಾಗಿದೆ. ರಥಬೀದಿಯನ್ನು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಉಳಿಸಿ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.

ಯೋಜನೆಯ ಜಿಲ್ಲಾ ಅಧಿಕಾರಿ ಪುರುಷೋತ್ತಮ ಪಿ.ಕೆ. ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 150 ದೇವಸ್ಥಾನಗಳನ್ನು ಸ್ವಚ್ಚಗೊಳಿಸುವ ಕಾರ್ಯ ಮಾಡಲಾಗಿದೆ. ಜ.14ರೊಳಗೆ ಉಳಿದ 200 ದೇವಸ್ಥಾನಗಳನ್ನು ಶುಚಿಗೊಳಿ ಸುವ ಗುರಿಯನ್ನು ಹೊಂದಲಾಗಿದೆ. ಅದೇ ರೀತಿ ದ.ಕ. ಜಿಲ್ಲೆಯಲ್ಲಿ 400 ದೇವಸ್ಥಾನಗಳನ್ನು ಸ್ವಚ್ಛಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ಪೇಜಾವರ ಕಿರಿಯ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಠದ ಕೊಳಚೆ ನೀರನ್ನು ಪುನಃ ಶುದ್ಧೀಕರಿಸಿ ಉಪಯೋಗಿಸುವ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಮಠದ ದಿವಾನ ರಘುರಾಮ ಆಚಾರ್ಯ, ಅದಮಾರು ಮಠದ ದಿವಾನ ವೆಂಕಟರಮಣ ಮುಚ್ಚಿಂತ್ತಾಯ, ನಗರಸಭಾ ಸದಸ್ಯ ಶ್ಯಾಮ್‌ಪ್ರಸಾದ್ ಕುಡ್ವಾ ಉಪಸ್ಥಿತರಿದ್ದರು.

ವಾಸುದೇವ ಭಟ್ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News