×
Ad

ಕಾಸರಗೋಡು: ಡಿವೈಎಫ್ ಐ - ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

Update: 2017-01-11 21:16 IST

ಕಾಸರಗೋಡು , ಜ.11 : ಡಿ ವೈ ಎಫ್ ಐ - ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದ ಘಟನೆ ಬುಧವಾರ ಸಂಜೆ ಬೋವಿಕ್ಕಾನದಲ್ಲಿ ನಡೆದಿದ್ದು, ಒಂದು ಕಾರಿಗೆ ಬೆಂಕಿ ಹಚ್ಚಲಾಗಿದೆ.

ಆಟೋ  ರಿಕ್ಷಾ ಹಾನಿಗೊಳಿಸಲಾಗಿದ್ದು , ಅಂಗಡಿಯೊಂದಕ್ಕೆ ನುಗ್ಗಿ  ದಾಂಧಲೆ  ನಡೆಸಲಾಗಿದೆ.

ಎಂಡೋಸಲ್ಫಾನ್ ಸಂತ್ರಸ್ಥರಿಗೆ ನಷ್ಟ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್  ಆದೇಶದ ಹಿನ್ನಲೆಯಲ್ಲಿ  ಅಭಿನಂದನೆ  ಸಲ್ಲಿಸಿ  ಡಿ ವೈ ಎಫ್ ಐ ಕಾರ್ಯಕರ್ತರು ಸಂಜೆ  ಬೋವಿಕ್ಕಾನ ಪೇಟೆಯಲ್ಲಿ ಮೆರವಣಿಗೆ ನಡೆಸಿತ್ತು .ಈ ಸಂದರ್ಭದಲ್ಲಿ ಘರ್ಷಣೆ ನಡೆದಿದ್ದು, ಈ ಸಂದರ್ಭದಲ್ಲಿ  ಮಾರುತಿ ಕಾರೊಂದಕ್ಕೆ ಬೆಂಕಿ ಹಚ್ಚಲಾಗಿದೆ.  ಇನ್ನೊಂದು ಆಟೋರಿಕ್ಷಾವನ್ನು ಹಾನಿಗೊಳಿಸಲಾಗಿದೆ.

ಡಿ ವೈ ಎಫ್ ಐ ಕಾರ್ಯಕರ್ತರ ಮೆರವಣಿಗೆ ಮೇಲೆ  ಕಿಡಿಗೇಡಿಗಳು ಕಲ್ಲೆಸೆದಿದ್ದು ,  ಈ ಸಂದರ್ಭದಲ್ಲಿ ಘರ್ಷಣೆ ನಡೆದಿದೆ. 

ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರು ನಿಯೋಜಿಸಲಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News