ಮಂಗಳೂರು : ಖಾಸಗಿ ಹೋಟೆಲ್ ಗೆ ದಾಳಿ, ವೇಶ್ಯಾವಾಟಿಕೆ ಪತ್ತೆ
Update: 2017-01-11 21:34 IST
ಮಂಗಳೂರು , ಜ.11 : ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಯೊಂದರಲ್ಲಿ ವೇಶ್ಯಾವಾಟಿಕೆಗೆ ಪ್ರೋತ್ಸಾಹಿಸುತ್ತಿದ್ದ ಇಬ್ಬರು ದಲ್ಲಾಳಿಗಳು ಮತ್ತು ಓರ್ವ ಗ್ರಾಹಕನನ್ನು ಬಂಧಿಸಲಾಗಿದೆ.
ಅಲ್ಲಿದ್ದ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು ನಗರದ ಕುಮಾರ್ ಇಂಟರ್ ನ್ಯಾಶನಲ್ ಹೋಟೆಲ್ ಗೆ ದಾಳಿ ನಡೆಸಿದ ಸಂದರ್ಭ ಈ ವೇಶ್ಯಾವಾಟಿಕೆ ಬೆಳಕಿಗೆ ಬಂದಿದ್ದು , 7 ಮೊಬೈಲ್ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.