ಮೂಡುಬಿದಿರೆ : ಮಹಾವೀರ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸೌರಭ

Update: 2017-01-11 17:31 GMT

ಮೂಡುಬಿದಿರೆ , ಜ.11: ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನಮ್ಮ ಸಂಸ್ಕೃತಿ, ಸಂಸ್ಕಾರ, ನಡವಳಿಕೆಗಳು ತಿಳಿಯಲು ಸಹಕಾರಿಯಾಗುತ್ತವೆ. ಸರಕಾರದಿಂದ ಪ್ರತಿ ಜಿಲ್ಲೆಗಳಲ್ಲಿಯೂ ಈ ಕಾರ್ಯಕ್ರಮಗಳು ನಡೆಯುತ್ತಿದ್ದು, ಶಾಲಾ ಕಾಲೇಜುಗಳಲ್ಲಿ ಆಯೋಜಿಸುವುದರಿಂದ ಯುವ ಪೀಳಿಗೆಗೆ ಆಸ್ವಾದಿಸಲು ಅವಕಾಶ ಸಿಗುತ್ತದೆ ಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.

ಅವರು ದ.ಕ. ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಬುಧವಾರ ಮೂಡುಬಿದಿರೆಯ ಮಹಾವೀರ ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಜಿ.ಪಂ. ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ , ಕನ್ನಡ ಭಾಷೆ ಸಮೃದ್ಧವಾದ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಭಾಷೆ. ಜನಪದೀಯ ಗುಣಗಳನ್ನು ಹೊಂದಿರುವ ನಮ್ಮ ಮಣ್ಣಿನ ಭಾಷೆ, ಬದುಕಿನ ವಿಚಾರಗಳನ್ನು ಉಳಿಸಿ ಬೆಳೆಸುವಲ್ಲಿ ಯುವ ಜನತೆ ರಾಯಬಾರಿಗಳಾಗಬೇಕಾಗಿದೆ ಎಂದರು.

ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್.ಸುವರ್ಣ, ಸದಸ್ಯೆ ರೂಪಾ ಸಂತೋಷ್ ಶೆಟ್ಟಿ, ಬಾಹುಬಲಿ ಪ್ರಸಾದ್, ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೀಕ್ಷಿತ್ ಅತಿಥಿಗಳಾಗಿ ಭಾಗವಹಿಸಿದ್ದರು.

ಕೆ.ವಿ ರಮಣ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ನಾವಡ ವಂದಿಸಿದರು.

ಡಿ.ಬಿ.ಪ್ರಕಾಶ್ ದೇವಾಡಿಗ ಬಳಗ ಬೆಳ್ತಂಗಡಿ (ಸ್ಯಾಕ್ಸೋಫೋನ್ ವಾದನ), ಪುತ್ತೂರು ಪಾಂಡುರಂಗ ನಾಯಕ್ ಮತ್ತು ಬಳಗ (ಹಿಂದುಸ್ಥಾನೀ ಗಾಯನ), ಕೆ.ವಿ.ರಮಣ್ ಮಂಗಳೂರು ಮತ್ತು ಬಳಗ (ಸುಗಮ ಸಂಗೀತ), ಕಸ್ತೂರಿ ಮತ್ತು ಬಳಗ ಮಂಗಳೂರು (ಜನಪದ ಗೀತೆ), ವಿದುಷಿ ಮೋನಿಕಾರಾವ್ ಮತ್ತು ಬಳಗ (ಸಮೂಹ ನೃತ್ಯ), ಸುರತ್ಕಲ್‌ನ ಮಂಜುನಾಥ ಮತ್ತು ಬಳಗ (ಕಂಸಾಳೆ), ಜಗದೀಶ ಮತ್ತು ಬಳಗ (ಕರಂಗೋಲು), ಮಂಗಳೂರಿನ ಎಸ್.ಪಿ.ಗುರುದಾಸ್ (ಕಥಾ ಕೀರ್ತನೆ), ಪುತ್ತೂರು ರಾಮಕೃಷ್ಣ ನಾಯಕ್ ಮತ್ತು ತಂಡ (ಯಕ್ಷಗಾನ)ದಿಂದ ಕಾರ್ಯಕ್ರಮಗಳು ಪ್ರಸ್ತುತಗೊಂಡವು.

 ಪ್ರಾಯೋಜಿತ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರದ ಚಿಂತನಪಲ್ಲಿ ಸೋಮಶೇಖರ್ ಮತ್ತು ಬಳಗ (ಕರ್ನಾಟಕ ಶಾಸ್ತ್ರೀಯ ಸಂಗೀತ) ಮತ್ತು ಮಂಗಳೂರಿನ ಗಾನ ನೃತ್ಯ ಅಕಾಡೆಮಿಯಿಂದ (ಸಮೂಹ ನೃತ್ಯ) ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News