ಸುಭಾಸ್‌ನಗರ: ಇಂಟರ್‌ಲಾಕ್, ಒಳಚರಂಡಿ ಕಾಮಗಾರಿ ಉದ್ಘಾಟನೆ

Update: 2017-01-11 17:36 GMT

ಮಂಗಳೂರು, ಜ. 11: ಸುಭಾಸ್‌ನಗರ ಒಂದನೆ ಮುಖ್ಯರಸ್ತೆಯ ಮೂರನೆ ಅಡ್ಡ ರಸ್ತೆಯಲ್ಲಿ ಅಳವಡಿಸಲಾಗಿರುವ ಇಂಟರ್‌ಲಾಕ್ ಮತ್ತು ಕಾಂಕ್ರಿಟ್ ಒಳಚರಂಡಿ ಕಾಮಗಾರಿಯ ಉದ್ಘಾಟನೆಯನ್ನು ಇಂದು ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸುಭಾಸ್‌ನಗರ ರೆಸಿಡೆನ್ಶಿಯಲ್ ಅಸೋಸಿಯೇಶನ್ ವತಿಯಿಂದ ಅಬ್ದುಲ್ ಲತೀಫ್ ಅವರನ್ನು ಸನ್ಮಾನಿಸಲಾಯಿತು.

ಅಸೋಸಿಯೇಶನ್‌ನ ಅಧ್ಯಕ್ಷ ನಿತಿನ್, ಉಪಾಧ್ಯಕ್ಷ ಮಾರ್ಶಲ್, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News