ಅಕ್ರಮ ಮರಳುಗಾರಿಕೆಗೆ ದಾಳಿ; ಸೊತ್ತು ವಶ

Update: 2017-01-11 18:25 GMT

ಕೋಟ, ಜ.11: ಮೊಳಹಳ್ಳಿ ಗ್ರಾಮ ವಾರಾಹಿ ನದಿಯಲ್ಲಿ ಜ.9ರಂದು ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ಮತ್ತು ಸಾಗಣೆಗೆ ದಾಳಿ ನಡೆಸಿರುವ ಅಕಾರಿಗಳ ತಂಡ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ತಡವಾಗಿ ವರದಿಯಾಗಿದೆ.

ಜ.9ರಂದು ಸಂಜೆ 7ಗಂಟೆಗೆ ಮಾಸ್ತಿಕಟ್ಟೆ ಬಳಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 7 ಮೆಟ್ರಿಕ್ ಟನ್ ಮರಳು ಮತ್ತು ಲಾರಿಯನ್ನು ತಂಡ ವಶಪಡಿಸಿಕೊಂಡಿದೆ.

ಸಂಜೆ 7:45ಕ್ಕೆ ಮೊಳಹಳ್ಳಿ ಗ್ರಾಮದ ಮರತ್ತೂರು ವಾರಾಹಿ ನದಿಯಲ್ಲಿ ಶಾಂತರಾಮ ಶೆಟ್ಟಿ, ಆರ್ಡಿಯ ಮಣಿ ಶೆಟ್ಟಿ, ಮರತ್ತೂರು ಪುಷ್ಟರಾಜ್ ಶೆಟ್ಟಿ ಮತ್ತು ಬೆಳ್ವೆ ಜಯಂತ ಶೆಟ್ಟಿ ಎಂಬವರು ನಡೆಸುತ್ತಿದ್ದ ಅಕ್ರಮ ಮರಳುಗಾರಿಕೆಗೆ ದಾಳಿ ನಡೆಸಿದ ತಂಡ ಸೊತ್ತುಗಳನ್ನು ವಶಪಡಿಸಿಕೊಂಡಿದೆ. ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಮಹಾದೇಶ್ವರ ನೇತೃತ್ವದಲ್ಲಿ ಕುಂದಾಪುರ ತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು ಮತ್ತು ಅಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಹಿಲಿಯಾಣ ಗ್ರಾಮದ ಹೈಕಾಡಿಯಿಂದ ಕಳವು ಮಾಡಿದ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹೂಡೆಯ ಮುಹಮ್ಮದ್ ನಯಾಝ್ ಎಂಬವರ ಲಾರಿಯನ್ನು ಅಕಾರಿಗಳ ತಂಡ ಹಾಲಾಡಿ- ಕೋಟೇಶ್ವರ ಜಂಕ್ಷನ್ ಮೇಲು ಸೇತುವೆ ಸರ್ವಿಸ್ ರಸ್ತೆ ಬಳಿ ಜ.9ರಂದು ರಾತ್ರಿ 11:20ರ ಸುಮಾರಿಗೆ ವಶಕ್ಕೆ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News