×
Ad

ಸೈದ್ಯಾಂತಿಕ ನಿಲುವುಗಳನ್ನು ನೈಜ್ಯವಾಗಿ ಸಮಾಜಕ್ಕೆ ತಲುಪಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ: ರಮಾನಾಥ ರೈ

Update: 2017-01-12 13:20 IST

ಬಂಟ್ವಾಳ, ಜ.12: ಸ್ವಾಮೀ ವಿವೇಕಾನಂದರ ಸೈದ್ಯಾಂತಿಕ ನಿಲುವುಗಳನ್ನು ನೈಜ್ಯವಾಗಿ ಸಮಾಜಕ್ಕೆ ತಲುಪಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ ಹಮ್ಮಿಕೊಂಡ ಸ್ವಾಮೀ ವಿವೇಕಾನಂದರ 154ನೆ ಜನ್ಮ ದಿನಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೆಟ್ಟವರನ್ನು ಮನುಷ್ಯರನ್ನಾಗಿಸಿ ಮಾಡುವುದು, ಮನುಷ್ಯರನ್ನು ದೇವರನ್ನಾಗಿಸುವುದು ಧರ್ಮದ ಕೆಲಸ ಎಂಬುದನ್ನು ಸಾರಿದ ಸಾಮಾಜಿಕ ಸಾಮರಸ್ಯ ಪ್ರತಿಪಾದಿಸಿದವರು ಸ್ವಾಮೀ ವಿವೇಕಾನಂದ ಎಂದು ಹೇಳಿದ ಅವರು, ರಾಜಕೀಯ ಲಾಭಕ್ಕಾಗಿ ಸುಳ್ಳು ನುಡಿಯುವುದನ್ನು ಕೊನೆಗಾಣಿಸಬೇಕು ಎಂದರು. ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಬಂಟ್ವಾಳ ಕಸಪಾ ಅಧ್ಯಕ್ಷ ಮೋಹನ್ ರಾವ್, ಎಸ್‌ವಿಎಸ್ ಕಾಲೇಜಿನ ಪ್ರಾಂಶುಪಾಲ ಪಾಂಡುರಂಗ ನಾಯ್ಕಾ ಉಪಸ್ಥಿತರಿದ್ದರು.

ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿದರು. ಕಾಮಾಜೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಿರೀಶ್ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿರು.  ಕಲಾವಿದ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿ, ನಂದ ಕಿಶೋರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News