ಪಾಕ್‌ನಿಂದ ನುಸುಳುವಿಕೆ ಸಾಧ್ಯತೆ : ರಾಜಸ್ಥಾನ ಗಡಿಯಲ್ಲಿ ಕಟ್ಟೆಚ್ಚರ
Update: 2017-01-12 16:26 IST
ಜೈಪುರ,ಜ.12: ಪಾಕಿಸ್ತಾನದಿಂದ ಭಾರತ ಗಡಿಯೊಳಗೆ ಭಯೋತ್ಪಾದಕರ ನುಸುಳುವಿಕೆ ಸಾಧ್ಯತೆಯ ಬಗ್ಗೆ ಗುಪ್ತಚರ ಮಾಹಿತಿಗಳು ಲಭಿಸಿರುವ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಕಟ್ಟೆಚ್ಚರವನ್ನು ಘೋಷಿಸಲಾಗಿದೆ.
ಭಯೋತ್ಪಾದಕರ ನುಸುಳುವಿಕೆ ಬಗ್ಗೆ ಎಲ್ಲ ಜಾಗ್ರತೆಯನ್ನೂ ವಹಿಸುವಂತೆ ಗಡಿ ಜಿಲ್ಲೆಗಳ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶ ನೀಡಲಾಗಿದೆ ಎಂದು ಡಿಜಿಪಿ ಮನೋಜ ಭಟ್ ಅವರು ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು.