×
Ad

ಎಂಡೋಸಲ್ಫಾನ್: ಪರಿಹಾರ ನೀಡಲು ಡಿವೈಎಫ್‌ಐ ಒತ್ತಾಯ

Update: 2017-01-12 18:08 IST

ಮಂಗಳೂರು, ಜ.12: ಎಂಡೋಸಲ್ಫಾನ್‌ಗೆ ಸಂಬಂಧಿಸಿ ಕೇರಳದ ಸಂತ್ರಸ್ತರಿಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಕರ್ನಾಟಕದ ಸಂತ್ರಸ್ತರಿಗೂ ಪರಿಹಾರ ನೀಡಬೇಕು ಎಂದು ಡಿವೈಎಫ್‌ಐ ರಾಜ್ಯ ಸಮಿತಿ ಒತ್ತಾಯಿಸಿದೆ.

ಸುಪ್ರೀಂ ಕೋರ್ಟ್ ಸಂತ್ರಸ್ತರಿಗೆ 5 ಲಕ್ಷ ರೂ. ಪರಿಹಾರ, ಪುನರ್ವಸತಿ ಪ್ಯಾಕೇಜ್ ನೀಡಲು ಆದೇಶಿಸಿದೆ. ಕರ್ನಾಟಕದ ಕರಾವಳಿ ಭಾಗಗಳಲ್ಲಿ ಎಂಡೋ ಸಲ್ಫಾನ್ ಪೀಡಿತರ ಸಂಖ್ಯೆ ಕೇರಳಕ್ಕಿಂತ ಅಧಿಕವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕು. ಕೇರಳ ಮಾದರಿಯಲ್ಲಿ ಸಂತ್ರಸ್ತರ ಪಟ್ಟಿ ತಯಾರಿಸಬೇಕು. ಎಂಡೋ ಸಲ್ಫಾನ್ ಯಾವುದೇ ರೂಪದಲ್ಲಿಯೂ ಬಳಕೆಯಾಗದಂತೆ ಎಚ್ಚರ ವಹಿಸಬೇಕು. ಸುಪ್ರೀಂ ಕೋರ್ಟ್ ಕೇರಳಕ್ಕೆ ನೀಡಿದ ಆದೇಶವನ್ನು ಕರ್ನಾಟಕದಲ್ಲೂ ಸ್ವಯಂಪ್ರೇರಣೆಯಿಂದ ಸರಕಾರ ಪಾಲಿಸಬೇಕು ಎಂದು ಅಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News