ಸಂಚಾರಿ ಪೀಠ ಸ್ಥಾಪನೆಗಾಗಿ ಹೋರಾಟ ಮಾಡಲು ಒಕ್ಕೂಟ ರಚನೆ
ಮಂಗಳೂರು, ಜ.12: ದ.ಕ., ಉಡುಪಿ, ಉತ್ತರ ಕನ್ನಡ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ನಾಗರಿಕರಿಗೆ ಅನುಕೂಲವಾಗುವಂತೆ ಮಂಗಳೂರಿನಲ್ಲಿ ರಾಜ್ಯ ಉಚ್ಚನ್ಯಾಯಲಯದ ಸಂಚಾರಿ ಪೀಠ ಸ್ಥಾಪನೆಗಾಗಿ ಹೋರಾಟ ಮಾಡಲು ವಿವಿಧ 12 ಸಂಘಟನೆಗಳ ‘ಸರಕಾರೇತರ ಸಂಘಟನೆಗಳ ಒಕ್ಕೂಟ’ವನ್ನು ಸ್ಥಾಪಿಸಲಾಗಿದೆ.
ಒಕ್ಕೂಟದ ಶಾಖೆಗಳನ್ನು ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲೂ ವಿಸ್ತರಿಸಿ ಸಂಘಟನೆ ಬಲಗೊಳಿಸುವುದರೊಂದಿಗೆ ಅಲ್ಲಿನ ವಿವಿಧ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಡಲು ಈ ಒಕ್ಕೂಟ ನಿರ್ಧರಿಸಿದೆ. ಒಕ್ಕೂಟದ ವತಿಯಿಂದ ರಾಜ್ಯಪಾಲರು, ಹೈಕೋರ್ಟ್ ಮುಖ್ಯನ್ಯಾಯಾಧೀಶರು, ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಸರಕಾರದ ಪ್ರಧಾನ ಕಾರ್ಯದರ್ಶಿಗೆ ಕ್ರಮಕೈಗೊಳ್ಳಲು ನಿರ್ದೇಶನ ನೀಡಿರುವುದನ್ನು ಒಕ್ಕೂಟ ಸ್ವಾಗತಿಸಿದೆ.
ಒಕ್ಕೂಟದ ಸಲಹಾ ಮಂಡಳಿಯ ನಿರ್ದೇಶಕರಾಗಿ ಎಸ್.ಪಿ.ಚಂಗಪ್ಪ, ಪದ್ಮನಾಭ ಉಳ್ಳಾಲ್, ಗೌರವಾಧ್ಯಕ್ಷರಾಗಿ ವಿಜಯಕುಮಾರ್ ಹೆಗ್ಡೆ, ಅಧ್ಯಕ್ಷರಾಗಿ ಬಿ.ಎಸ್. ಚಂದ್ರು, ಕಾರ್ಯಾಧ್ಯಕ್ಷರಾಗಿ ಧರ್ಮೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಮೆಲ್ವಿನ್ ಲೆಸ್ಲಿ, ಉಪಾಧ್ಯಕ್ಷರಾಗಿ ಕಮಲಾಕ್ಷ ಎಂ., ವಿಜಯಲತಾ ನಾಯರ್, ಕಾರ್ಯದರ್ಶಿಯಾಗಿ ಕೆ. ಹಮೀದ್, ಸಂಘಟನಾ ಕಾರ್ಯದರ್ಶಿಯಾಗಿ ಸಂತಾನ್ ಮಿನೇಜಸ್, ಜಂಟಿಕಾರ್ಯದರ್ಶಿಯಾಗಿ ನವೀನ್‌ರಾಜ್ ಮತ್ತು ಗಂಗಾಧರ್ ಪಚ್ಚನಾಡಿ, ಕೋಶಾಧಿಕಾರಿ ವಿಶ್ವನಾಥ ಕೆ.ಬಿ. ಹಾಗೂ ಸದಸ್ಯರಾಗಿ ಪಣಿಯಾಲ್, ಜೀವನ್ ಪೂಜಾರಿ, ಸಂತೋಷ್, ಶೈಲೇಶ್ ಮತ್ತು ಜೀವನ್ ಆಯ್ಕೆಯಾಗಿರುವುದಾಗಿ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಚಂದ್ರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.