×
Ad

ಜ.15: ರಾಜ್ಯಮಟ್ಟದ ಆವಳಿ ಕಲಾವಿದರ ಕಲೋತ್ಸವ ಕಲಾಯುಗ್ಮ

Update: 2017-01-12 18:47 IST

 ಮಂಗಳೂರು, ಜ.12: ಶ್ರೀ ನಾಟ್ಯಾಂಜಲಿ ಕಲಾ ಅಕಾಡಮಿ ವತಿಯಿಂದ ಅವಳಿ ಕಲಾವಿದರ ರಾಜ್ಯಮಟ್ಟದ ಕಾರ್ಯಕ್ರಮ ‘ಕಲಾಯುಗ್ಮ’ ಜ.15ರಂದು ಸಂಜೆ 4:15ಕ್ಕೆ ನಗರದ ಪುರಭವನದಲ್ಲಿ ಜರಗಲಿದೆ ಎಂದು ಸಂಸ್ಥೆಯ ನಿದೇರ್ಶಕ ಚಂದ್ರಶೇಖರ ನಾವಡ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲೇ ಪ್ರಥಮ ಬಾರಿಗೆ ಈ ಕಲಾಯುಗ್ಮವನ್ನು ಹಮ್ಮಿಕೊಳ್ಳಲಾಗಿದೆ. 12 ಮಂದಿ ಅವಳಿ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. 30ಕ್ಕಿಂತ ಅಧಿಕ ಅವಳಿಗಳು ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಿ ಭಾಗವಹಿಸುವರು. ಶಾಂತಲಾ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಂ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಬಲವಂತ ರಾವ್ ಪಾಟೀಲ್, ಬಿ.ಭುಜಬಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

 ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ಅವಳಿಗಳು ಒಂದೇ ರೀತಿಯ ವಸವನ್ನು ಧರಿಸಿ ಸಂಜೆ 4 ಗಂಟೆಯ ಒಳಗಾಗಿ ಪುರಭವನಕ್ಕೆ ಬಂದು ಹೆಸರು ನೋಂದಾಯಿಸಿಕೊಳ್ಳಬೇಕು. ಅಂತವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಾಟ್ಯಾರಾಧನ ಸಂಸ್ಥೆಯ ನಿರ್ದೇಶಕ ಸುಮಂಗಲಾ ರತ್ನಾಕರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News