ನಾಳೆಯಿಂದ ಜಿಲ್ಲಾ ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನ
ಕಾಸರಗೋಡು,ಜ.12: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಜ. 14 ಹಾಗೂ 15ರಂದು ಬಾಯಾರುಪದವು ಶ್ರೀ ಪ್ರಶಾಂತಿ ವಿದ್ಯಾಕೇಂದ್ರದ ನಾಡೋಜ ಡಾ. ಕಿಞಣ್ಣ ರೈ ಸಭಾಂಗಣ ಮತ್ತು ದಿ. ಹಿರಣ್ಯ ನಾರಾಯಣ ಭಟ್ಟ ವೇದಿಕೆಯಲ್ಲಿ ಕಾಸರಗೋಡು ಜಿಲ್ಲಾ ಹತ್ತನೇಯ ಕನ್ನಡ ಸಾಹಿತ್ಯ ಸಮ್ಮೇಳನ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಖ್ಯಾತ ಕವಿ, ಸಾಹಿತಿ, ಸಂಶೋಧಕ, ಬಹುಭಾಷಾ ವಿದ್ವಾಂಸ ಡಾ. ಯು. ರಾಮ ಭಟ್ಟ ಸಮ್ಮೇಳನದ ಅಧ್ಯಕ್ಷರಾಗಿರುವರು.
14ರಂದು ಬೆಳಿಗ್ಗೆ 8.30ಕ್ಕೆ ಸಂಘಟನಾ ಸಮಿತಿ ಗೌರವಾಧ್ಯಕ್ಷ ಐ. ವಿ. ಭಟ್ಟ ರಾಷ್ಟ್ರ ಧ್ವಜಾರೋಹಣಗ್ಯ್ಯೆುವರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಗಟಕ ಅಧ್ಯಕ್ಷ ಎಸ್. ವಿ. ಭಟ್ಟ ಸಾಹಿತ್ಯ ಪರಿಷತ್ ಧ್ವಜಾರೋಹನಗ್ಯೆಯ್ಯುವರು. ಕ್ಯಾಂಪ್ಕೊ ಮಂಗಳೂರು ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಕನ್ನಡ ಧ್ವಜಾರೋಹಣಗೈಯ್ಯುವರು.
9.30ಕ್ಕೆ ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಸರದಿಂದ ಹೊರಟು ಬಾಯಾರು ಪದವಿನ ಮೂಲಕ ಸಮ್ಮೇಳನ ನಗರಕ್ಕೆ ಸಮ್ಮೇಳನಾಧ್ಯಕ್ಷರ ವರ್ಣರಂಜಿತ ಮೆರವಣಿಗೆ ನಡೆಯಲಿದೆ. ಪೈವಳಿಕೆ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ ಮೆರವಣಿಗೆಯನ್ನು ಉದ್ಘಾಟಿಸುವರು. 10.30ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರಗಲಿದೆ. ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರ ಜಿ. ವೆಂಕಟೇಶ್ ಉದ್ಘಾಟಿಸುವರು. ಕಾಸರಗೋಡು ಸಂಸದ ಪಿ. ಕರುಣಾಕರನ್ ಪುಸ್ತಕ ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸುವರು.
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನ ಆಶಯ ನುಡಿಗಳನ್ನಾಡುವರು. ಮಂಜೇಶ್ವರ ಶಾಸಕ ಪಿ. ಬಿ. ಅಬ್ದುಲ್ ರಝಾಕ್ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸುವರು. ಎಸ್. ವಿ. ಭಟ್ಟ ಪ್ರಾಸ್ತಾವಿಕ ಮಾತುಗಳನ್ನಾಡುವರು. ಖ್ಯಾತ ಕಾದಂಬರಿಗಾರ, ಹಿರಿಯ ಸಾಹಿತಿ ಡಾ. ಡಿ. ಕೆ. ಚೌಟ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡುವರು. ಸಮ್ಮೇಳನಾಧ್ಯಕ್ಷ ಡಾ. ಉಪ್ಪಂಗಳ ರಾಮ ಭಟ್ಟ ಮಾತನಾಡುವರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ಧರಾಮಯ್ಯ, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಬಿ. ಸುಬ್ಬಯ್ಯ ರೈ, ಜಿಲ್ಲಾ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಜಿಲ್ಲಾ ಪಂಚಾಯತಿ ಸದಸ್ಯೆ ಪುಷ್ಪಾ ಅಮೇಕ್ಕಳ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಅಧ್ಯಕ್ಷ ಸುರೇಂದ್ರ ಅಡಿಗ ನೀಲಾವರ, ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಸದಾಶಿವ ರಾವ್ ಟಿ. ಡಿ. ಮುಖ್ಯ ಅತಿಥಿಳಾಗಿ ಭಾಗವಹಿಸುವರು.
ಸಂಘಟನಾ ಸಮಿತಿ ಕಾರ್ಯಾಧ್ಯಕ್ಷ ರಾಮಕೃಷ್ಣ ಭಟ್ಟ ಪೆಲತ್ತಡ್ಕ, ಪ್ರಶಾಂತಿ ವಿದ್ಯಾಕೇಂದ್ರ ಸಂಚಾಲಕ ಹಿರಣ್ಯ ಮಹಾಲಿಂಗ ಭಟ್ಟ ಉಪಸ್ಥಿತರಿರುವರು. ಮಧ್ಯಾಹ್ನ 12.45ಕ್ಕೆ ನೃತ್ಯ ಸಮಬ್ರಮ ನಡೆಯಲಿದೆ. ರಕ್ಷಾ ಸಿ. ಎಚ್. ಅವರಿಂದ ಭರತನಾಟ್ಯ, ಶರಣ್ಯ ರೈ ಕಳ್ಳಿಗೆಬೀಡು ಅವರಿಂದ ಜಾನಪದ ನೃತ್ಯ, ಹೆದ್ದಾರಿ ಎಯುಪಿ ಶಾಲಾ ವಿದ್ಯಾರ್ಥಿನಿಯರಿಂದ ಸಮೂಹ ನೃತ್ಯ ರಂಗೇರಲಿದೆ. 1.30ಕ್ಕೆ ಕಾಸರಗೋಡಿನ ಕನ್ನಡ ದಿನಪತ್ರಕರ್ತರ ಸವಾಲುಗಳು ಎಂಬ ವಿಷಯದಲ್ಲಿ ನಡೆಯುವ ಗೋಷ್ಠಿಯಲ್ಲಿ ಹೊಸದಿಗಂತ ಉಪಸಂಪಾದಕಿ ಅ. ನಾ. ಪೂರ್ಣಿಮಾ ಅಧ್ಯಕ್ಷತೆ ವಹಿಸುವರು.
ಗಡಿನಾಡ ಪತ್ರಿಕೆಗಳು ನಡೆದು ಬಂದ ದಾರಿ ವಿಷಯದಲ್ಲಿ ರಾಧಾಕೃಷ್ಣ ಉಳಿಯತ್ತಡ್ಕ, ಕನ್ನಡ ಹೋರಾಟ ಮತ್ತು ದಿನಪತ್ರಿಕೆಗಳು ವಿಷಯದಲ್ಲಿ ಅಚ್ಯುತ ಚೇವಾರು, ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳು ವಿಷಯದಲ್ಲಿ ರಾಜೇಶ್ ರೈ ಚಟ್ಲ, ಕನ್ನಡ ಬಾಷೆ, ಸಾಹಿತ್ಯಕಕೆ ಪತ್ರಿಕೆಗಳ ಕೊಡುಗೆ ವಿಷಯದಲ್ಲಿ ಕೆ. ಗಂಗಾಧರ , ಪತ್ರಿಕೆಗಳ ಉಳಿವಿನಲ್ಲಿ ಕನ್ನಡಿಗರ ಪಾತ್ರ ವಿಷಯದಲ್ಲಿ ಸುಬ್ರಹ್ಮಣ್ಯ ಪೆರಿಯಪ್ಪಾಡಿ, ಪತ್ರಕರ್ತರಿಗೆ ಲಭಿಸಬೇಕಾದ ಕನಿಷ್ಠ ಸೌಲಭ್ಯಗಳು ವಿಷಯದಲ್ಲಿ ಎ. ಬಿ. ದಿನೇಶ್ ಬಲ್ಲಾಳ್, ಅನ್ಯಭಾಷೆಗಳ ಪ್ರಭಾವ ಮತ್ತು ಪ್ರೇರಣೆ ಎಂಬ ವಿಷಯದಲ್ಲಿ ಪುರುಷೋತ್ತಮ ಭಟ್ ಕೆ. ಪ್ರಬಂಧ ಮಂಡಿಸುವರು. ಅಪರಾಹ್ನ 3 ಗಂಟೆಗೆ ಯಕ್ಷವೈಭವ ಕಾರ್ಯಕ್ರಮ ಜರಗಲಿದ್ದು, ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ಬೀಷ್ಮ ವಿಜಯ ಕಥಾಭಾಗದ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
15ರಂದು ಬೆಳಿಗ್ಗೆ 9.30ಕ್ಕೆ ಬಾಯಾರು ಶ್ರೀ ಪ್ರಶಾಂತಿ ವಿದ್ಯಾಕೇಂದ್ರದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ, 10.30ಕ್ಕೆ ಬಿ. ಎಸ್. ಲೋಕೇಶ್ ಸಾಗರ್ ಕೊಡಗು ಹಾಗೂ ತಂಡದವರಿಂದ ಭಾವ ಸಿಂಚನ ಕಾರ್ಯಕ್ರಮ ಜರಗಲಿದೆ. 11 ಗಂಟೆಗೆ ಕಾಸರಗೊಡು ಕನ್ನಡಿಗರ ಜ್ವಲಂತ ಸಮಸ್ಯೆಗಳು ಎಂಬ ವಿಷಯದಲ್ಲಿ ನಡೆಯುವ ಗೋಷ್ಠಿಯಲ್ಲಿ ಹಿರಿಯ ನ್ಯಾಯವಾದಿ ಎಂ. ಎಸ್. ಥೋಮಸ್ ಡಿಸೋಜ ಅಧ್ಯಕ್ಷತೆ ವಹಿಸುವರು.
ಕೇರಳ ಸರಕಾರ-ಅಧಿಕಾರಿಗಳಿಮದ ನಾನಾರಂಗಗಳಲ್ಲಿ ಕನ್ನಡದ ಅವಗಣನೆ ಮತ್ತು ಭಾಷೆಗೆ ಒದಗಿದ ಗುಂಡಾಂತರ ವಿಷಯದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ನಿಕಟಪೂರ್ವ ಅಧ್ಯಕ್ಷ ಮಹಾಲಿಂಗೇಶ್ವರ ಭಟ್ ಎಂ. ವಿ., ಭಾಷಾ ಅಲ್ಪಸಂಖ್ಯಾತರಿಗಿರುವ ಸಂವಿಧಾನಬದ್ಧ ಹಕ್ಕುಗಳು ಮತ್ತು ಉಚ್ಛ ನ್ಯಾಯಾಲಯ, ಸರಕಾರ ನೀಡಿರುವ ಆದೇಶಗಳು ವಿಷಯದಲ್ಲಿ ಕನ್ನಡಪರ ಚಿಂತಕ ಡಾ. ನರೇಶ್, ನಮ್ಮ ಮಾತೃಭಾಷಾ ಸಂರಕ್ಷಣೆಗ ಅನುಸರಿಸಬೇಕಾದ ಪ್ರಧಾನ ಕಾರ್ಯಗಳು ವಿಷಯದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆಪ್ರಬಂಧ ಮಂಡಿಸುವರು.
ಮಧ್ಯಾಹ್ನ 12. 15ಕ್ಕೆ ನಡೆಯುವ ಕವಿಗೋಷ್ಠಿಯಲ್ಲಿ ಹಿರಿಯ ಕವಯಿತ್ರಿ ಡಾ. ಯು. ಮಹೇಶ್ವರಿ ಅಧ್ಯಕ್ಷತೆ ವಹಿಸುವರು. ಹರೀಶ್ ಪೆರ್ಲ, ವಿ. ಬಿ. ಕುಳಮವ, ಸುಂದರ ಬಾರಡ್ಕ, ವೆಂಕಟ ಭಟ್ಟ ಎಡನೀರು, ಬಾಲಕೃಷ್ಣ ಹೊಸಂಗಡಿ, ಪ್ರಸನ್ನ ಚೆಕ್ಕೆಮನೆ, ಆಶಾ ದಿಲೀಪ್ ಸುಳ್ಯಮೆ, ಹರೀಶ್ ಸುಲಾಯ ಒಡ್ಡಂಬೆಟ್ಟು, ಹರ್ಷ ಬಾಯಾರು, ಶೋಭಿತಾ ಕುಮಾರಿ ಒ., ಧನ್ಯಶ್ರೀ ಆರ್. ಎಲ್., ಶಿಲ್ಪಾ ಕೆ., ಸಂದೀಪ್ ಭಾಗವಹಿಸುವರು. 1.30ಕ್ಕೆ ಸುಪ್ರಿಯಾ ಜಿ. ಭಟ್, ಅಂಜಲಿ, ಶ್ರದ್ಧಾ ಭಟ್ ನಾಯರ್‌ಪಳ್ಳ ಅವರಿಂದ ಭಾವಗೀತೆ ನಡೆಯಲಿದೆ.
ಅಪರಾಹ್ನ 2 ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದ್ದು, ಹಾಡುಗಾರಿಕೆಯಲ್ಲಿ ವಿದುಷಿ ಮೇಘನಾ ಮೂರ್ತಿ ಬೆಂಗಳೂರು, ವಯಲಿನ್‌ನಲ್ಲಿ ಆಕಾಶವಾಣಿ ಕಲಾವಿದೆ ಮಂಜುಳಾ ಮೃಣಾಲಿನಿ, ಮೃದಂಗದಲ್ಲಿ ಡಾ. ಶಂಕರರಾಜ್ ಕಾಸರಗೋಡು, ಮೋರ್ಸಿಂಗ್‌ನಲ್ಲಿ ಬಾಲಕೃಷ್ಣ ಭಟ್ ಪುತ್ತೂರು ಭಾಗವಹಿಸುವರು. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಡಾ. ಉಪ್ಪಂಗಳ ರಾಮ ಭಟ್ಟ ಅಧ್ಯಕ್ಷತೆ ವಹಿಸುವರು.
ಕಂದಾಯ ಸಚಿವ ಇ. ಚಂದ್ರಶೇಖರ, ಕನ್ಟಾಕ ಸಚಿವ ಯು. ಟಿ. ಖಾದರ್, ಕಾಸರಗೊಡು ಶಾಸಕ ಎನ್. ಎ. ನೆಲ್ಲಿಕುನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ಸಾಧಕರಾದ ಗೋಪಾಲಕೃಷ್ಣ ಭಟ್ ಅಡ್ಕ, ಡಾ. ಡಿ. ಚಂದ್ರಶೇಖರ ಚೌಟ, ಅಹಮ್ಮದ್ ಕುಞಿ, ಕೆ. ತೋಮಸ್ ಕ್ರಾಸ್ತ, ಬಿ. ಪಿ. ಮಂಜುನಾಥ ಭಂಡಾರಿ, ಎಸ್. ನಾರಾಯಣ ಭಟ್ಟ, ವೈ. ಸತ್ಯನಾರಾಯಣ, ದೇವಕಾನ ಕೃಷ್ಣ ಭಟ್ಟ, ವಿಜಯ ಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಲಾಗುವುದು. ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಡಾ. ಎ. ವಿ. ನಾವಡ ಸಮಾರೊಪ ಭಾಷಣಗೈಯ್ಯುವರು.
ಶಿಕ್ಷಣ ಖಾತೆ ಉಪನಿರ್ದೇಶಕ ಮಹಾಲಿಂಗೇಶ್ವರ ರಾಜ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೆಶ ಸಾಲಿಯಾನ್, ಕರ್ನಾಟಕ ಬ್ಯಾರಿ ಅಕಾಡೆಮಿ ಸದಸ್ಯೆ ಆಯಿಷಾ ಎ. ಎ. ಪೆರ್ಲ, ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಅಧ್ಯಕ್ಷ ಜಯರಾಮ ಮಂಜತ್ತಾಯ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಸದಾಶಿವ ವರ್ಕಾಡಿ, ಕರ್ನಾಟಕ ಸಮಿತಿ ಅದ್ಯಕ್ಷ ಮುರಳೀಧರ ಬಳ್ಳಕ್ಕುರಾಯ, ಪೈವಳಿಕೆ ಪಂಚಾಯತಿ ಸದಸ್ಯೆ ಭವ್ಯ, ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ನಂದಿಕೇಶನ್ ಶುಭಾಶಂನೆಗೈಯ್ಯುವರು. ನಿವೃತ್ತ ಮುಖ್ಯೋಪಾಧ್ಯಾಯ ಕೆ. ನಾರಾಯಣ ಗಟ್ಟಿ ಠರಾವು ಮಂಡಿಸುವರು. 6 ಗಂಟೆಗೆ ನಾಟ್ಯಾಯನ ಮೂಡುಬಿದಿರೆ ಪ್ರಸ್ತುತಪಡಿಸುವ ಅಪೂರ್ವ ಕಾರ್ಯಕ್ರಮ ಜರಗಲಿದೆ.