×
Ad

ಬೆಳ್ಳಾರೆ ಪ್ರೊ ಕಬಡ್ಡಿ : ಸಲಾಲ ತಂಡಕ್ಕೆ ಪ್ರಶಸ್ತಿ

Update: 2017-01-12 19:56 IST

ಬೆಳ್ಳಾರೆ,ಜ.12 : ಇಲ್ಲಿನ ಸಿಟಿ ಗೈಸ್ ಆಶ್ರಯದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುರುಷರ 8 ತಂಡಗಳ ಲೀಗ್ ಪ್ರೊ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟವು ಬೆಳ್ಳಾರೆ ಜೂನಿಯರ್ ಕಾಲೇಜು ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.

ಬೆಳ್ಳಾರೆ ಸಿಟಿ ಗೈಸ್ ಅಧ್ಯಕ್ಷೆ ಸರಸ್ವತಿ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಬಡ್ಡಿ ಪಂದ್ಯಾಟವನ್ನು ಜಿ.ಪಂ. ಸದಸ್ಯ ಎಸ್.ಎನ್. ಮನ್ಮಥ ಉದ್ಘಾಟಿಸಿದರು. ಮಂಗಳೂರು ವಿವಿ ಮಾಜಿ ಕಬಡ್ಡಿ ಆಟಗಾರ ಸುನಿಲ್ ರೈ ಪೆರುವಾಜೆ ಕ್ರೀಡಾಂಗಣ ಉದ್ಘಾಟಿಸಿದರು. ಬೆಳ್ಳಾರೆ ಗ್ರಾ.ಪಂ. ಸದಸ್ಯ ನವೀನ್ ಕುಮಾರ್ ರೈ ತಂಬಿನಮಕ್ಕಿ ಪಂದ್ಯಾಟದ ಟ್ರೋಫಿ ಅನಾವರಣಗೊಳಿಸಿದರು. ಸುಳ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಶ್ರೀರಾಮ ಪಾಟಾೆ ಮೆರವಣಿಗೆಗೆ ಚಾಲನೆ ನೀಡಿದರು.

ರಾಜ್ಯ ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಸಚಿವ ಯು.ಟಿ. ಖಾದರ್, ಶಾಸಕ ಎಸ್. ಅಂಗಾರ, ಕರ್ನಾಟಕ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಶುಭ ಹಾರೈಸಿದರು.

ಅಮೆಚೂರು ಕಬಡ್ಡಿ ಎಸೋಸಿಯೇಶನ್ ಸುಳ್ಯ ತಾಲೂಕು ಅಧ್ಯಕ್ಷ ಎನ್.ವಿ. ರಾಮಚಂದ್ರ, ಕಾಯಾದರ್ಶಿ ಕೆ.ಟಿ. ವಿಶ್ವನಾಥ, ಜಿಲ್ಲಾ ಉಪಾಧ್ಯಕ್ಷ ಸುಧಾಕರ ನೆಟ್‌ಕಾಂ, ಬೆಳ್ಳಾರೆ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಯು. ಸುಬ್ಬಯ್ಯ ಗೌಡ, ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ರಾಷ್ಟ್ರ ಪ್ರಶಸ್ತಿ ವಿಜೇತ ರವಿ ಕಕ್ಕೆಪದವು, ಕೆಯ್ಯೂರು ಗ್ರಾ.ಪಂ. ಸದಸ್ಯ ಕೆ.ಎಂ. ಹನೀಫ್ ಮಾಡಾವು, ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸುರೇಶ್ ರೈ ಪನ್ನೆ, ಬೆಳ್ಳಾರೆ ವಾಣಿಜ್ಯ ವರ್ತಕರ ಸಂಘದ ಅಧ್ಯಕ್ಷ ಪ್ರಮೋದ್ ರೈ, ಎಸ್‌ಡಿಪಿಐ ದ.ಕ. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಬೆಳ್ಳಾರೆ ಗ್ರಾ.ಪಂ. ಸದಸ್ಯ ಆರಿಫ್ ಬೆಳ್ಳಾರೆ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಾಥ್ ಬಾಳಿಲ, ತಾ.ಪಂ. ಮಾಜಿ ಸದಸ್ಯೆ ಚಂದ್ರಶೇಖರ ಕಾಮತ್, ಉದ್ಯಮಿ ಮಾಧವ ಗೌಡ ಕಾಮಧೇನು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಲತೀಫ್ ನೇರಳಕಟ್ಟೆ, ಝಕರಿಯಾ ಕಲ್ಲಡ್ಕ, ಅಮೆಚೂರು ಕಬಡ್ಡಿ ಎಸೋಸಿಯೇಶನ್ ಕೋಶಾಧಿಕಾರಿ ಆರ್.ಬಿ. ಬಶೀರ್, ಆರಿಫ್ ಬೆಳ್ಳಾರೆ, ಬಿ.ಎ. ಮುಹಮ್ಮದ್ ಶಾಹಿನ್ ಮಾಲ್, ವಿರಾಟ್ ಫ್ರೆಂಡ್ಸ್ ಅಧ್ಯಕ್ಷ ಲಕ್ಷ್ಮೀಕಾಂತ್ ಬೆಳ್ಳಾರೆ, ಜಮಾಲ್ ಕಳಂಜ ಮೊದಲಾದವರು ುುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಿಯಾರ್ ಬೆಳ್ಳಾರೆ, ಅನ್ಸಾರ್ ಬೆಳ್ಳಾರೆ, ಆಬಿದ್ ಪೈಚಾರ್ ಹಾಗೂ ಯಹ್ಯಾ ಬೆಳ್ಳಾರೆ ಪಂದ್ಯಾಕೂಟದ ನೇತೃತ್ವ ವಹಿಸಿದ್ದರು. ಬೆಳ್ಳಾರೆ ವೃತ್ತ ನಿರೀಕ್ಷಕ ಎಂ.ವಿ. ಚೆಲುವಯ್ಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಸನ್ಮಾನ :ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೆ.ಎಸ್. ಮುಹಮ್ಮದ್ ಯಾಸಿರ್ ಕಲ್ಲಡ್ಕ ಹಾಗೂ ಪ್ರಿಯಾಂಕ ಕಾಮತ್ ಬೆ್ಳಾರೆ ಅವರನ್ನು ಸನ್ಮಾನಿಸಲಾಯಿತು.

ಸಲಾಲ ತಂಡಕ್ಕೆ ಪ್ರಶಸ್ತಿ

8 ತಂಡಗಳ ಲೀಗ್ ಮಾದರಿಯ ಪಂದ್ಯಾಕೂಟದಲ್ಲಿ ಸಲಾಲ ಸ್ಟ್ರೈಕರ್ಸ್‌ ಬೆಳ್ಳಾರೆ ತಂಡವು ಪ್ರಥಮ, ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ, ನ್ಯೂ ಫ್ಲಾಶ್ ಬೆಳ್ಳಾರೆ ತಂಡಡವು ತೃತೀಯ ಹಾಗೂ ಪಿಟ್ ಫೈಟರ್ಸ್‌ ತಂಡವು ಚತುರ್ ಸ್ಥಾನವನ್ನು ಪಡೆದುಕೊಂಡಿತು.

ಸಿಟಿ ಗಐಸ್ ಪ್ರಧಾನ ಕಾರ್ಯದರ್ಶಿ ನಿಯಾರ್ ಬೆಳ್ಳಾರೆ ಸ್ವಾಗತಿಸಿ, ಹಮೀದ್ ಗೋಳ್ತಮಜಲು ವಂದಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News