ಕರಾವಳಿ ಉತ್ಸವಕ್ಕೆ ಉತ್ತರ ಭಾರತದ ಮಳಿಗೆಗಳು

Update: 2017-01-12 15:08 GMT

ಮಂಗಳೂರು, ಜ. 12: ಕರಾವಳಿ ಉತ್ಸವ ಸಮಿತಿ ವತಿಯಿಂದ ನಗರದ ಮಂಗಳ ಕ್ರೀಡಾಂಗಣದಲ್ಲಿ ಡಿ.23ರಿಂದ ಆರಂಭಗೊಂಡು ಫೆ.15ರ ವರೆಗೆ ನಡೆಯುವ ಕರಾವಳಿ ಉತ್ಸವ ವಸ್ತು ಪ್ರದರ್ಶನಕ್ಕೆ ಉತ್ತರ ಭಾರತದ ಹೆಚ್ಚುವರಿ ಮಳಿಗೆಗಳು ಆರಂಭಗೊಂಡು ಜನಾಕರ್ಷಣೆ ಪಡೆಯುತ್ತಿದೆ.

ಈಗಾಗಲೇ ನೂರಕ್ಕೂ ಹೆಚ್ಚು ಮಳಿಗೆಗಳು ಪ್ರದರ್ಶನದಲ್ಲಿ ಪಾಲ್ಗೊಂಡಿವೆ. ಆಟಿಕೆಗಳು, ಉಡುಗೊರೆ ಸಾಮಗ್ರಿ ಸಹಿತ ಗೃಹ ಬಳಕೆಯ ಸಾಮಗ್ರಿಗಳು ದೊರೆಯಲಿವೆ. ಮನೋರಂಜನೆಯ ಆಟಗಳ ಸಹಿತ ಆಲಂಕಾರಿಕ ವಸ್ತುಗಳ ಮಳಿಗೆಗಳು, ಮಕ್ಕಳ ಆಟಿಕೆ ಹಾಗೂ ದಿನಬಳಕೆಯ ಉಪಯುಕ್ತ ಸಾಮಗ್ರಿಗಳ ಮಳಿಗೆಗಳು ವಸ್ತು ಪ್ರದರ್ಶನದಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News