ಮಂಗಳೂರು-ಬಳ್ಳಾರಿ ಕೆಎಸ್ಸಾರ್ಟಿಸಿ ವೋಲ್ವೋ ಬಸ್
Update: 2017-01-12 20:54 IST
ಮಂಗಳೂರು, ಜ.12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲ/ಉತ್ತಮ ಸೇವೆಗಾಗಿ ಜ.16ರಿಂದ ಮಂಗಳೂರು-ಬಳ್ಳಾರಿ ವಯಾ ಉಡುಪಿ, ಮಣಿಪಾಲ, ಕುಂದಾಪುರ ಶಿವಮೊಗ್ಗ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ ಮಾರ್ಗದಲ್ಲಿ ವೋಲ್ವೋ ಸಾರಿಗೆಯನ್ನು ಈ ಕೆಳಕಂಡ ವೇಳಾಪಟ್ಟಿಯಂತೆ ಪ್ರಾರಂಭವಾಗಲಿದೆ. ಮಂಗಳೂರಿನಿಂದ ಪ್ರತೀದಿನ ರಾತ್ರಿ 8 ಗಂಟೆಗೆ ಹೊರಡುವ ಬಸ್ಸು, ಉಡುಪಿ( 9 ಗಂಟೆ), ಮಣಿಪಾಲ(9.10), ಕುಂದಾಪುರ( 10) ಮೂಲಕ ಬೆಳಿಗ್ಗೆ 6 ಗಂಟೆಗೆ ಬಳ್ಳಾರಿ ತಲುಪಲಿದೆ. ಬಳ್ಳಾರಿಯಿಂದ ಪ್ರತೀ ದಿನ ಸಂಜೆ 7 ಗಂಟೆಗೆ ಹೊರಟು, ಬೆಳಗ್ಗೆ 3.55ಕ್ಕೆ ಉಡುಪಿ, 5.15ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರು-ಬಳ್ಳಾರಿ ಪ್ರಯಾಣ ದರ ರೂ. 580 ಆಗಿದೆ. ಈ ಸಾರಿಗೆಗೆ ಆನ್‌ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು www.ksrtc.in ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್‌ಗೆ ಸಂಪರ್ಕಿಸಲು ಎಂದು ಕೆಎಸ್ಸಾರ್ಟಿಸಿ ಪ್ರಕಟನೆ ತಿಳಿಸಿದೆ.