ರಾ.ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ನೇತ್ರ ತಪಾಸಣೆ
Update: 2017-01-12 21:13 IST
ಉಡುಪಿ, ಜ.12: 28ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಿಲ್ಲಾಸ್ಪತ್ರೆ ವೈದ್ಯರಾದ ಡಾ.ನಿತ್ಯಾನಂದ ನಾಯಕ್ ಇವರ ನೇತೃತ್ವದಲ್ಲಿ 85 ಚಾಲಕರಿಗೆ ಉಚಿತ ನೇತ್ರ ತಪಾಸಣೆಯನ್ನು ನಡೆಸಲಾಯಿತು.
ಉಪ ಸಾರಿಗೆ ಆಯುಕ್ತ ಎಚ್.ಗುರುಮೂರ್ತಿ ಕುಲಕರ್ಣಿ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಎ.ರಾಮಕೃಷ್ಣ ರೈ ಉಪಸ್ಥಿತರಿದ್ದರು.