×
Ad

ಎ.1ರಿಂದ ಜಿಎಸ್‌ಟಿ ಜಾರಿ: ಸಚಿವೆ ನಿರ್ಮಲಾ ವಿಶ್ವಾಸ

Update: 2017-01-12 23:12 IST

ಉಡುಪಿ, ಜ.12: ಗೂಡ್ಸ್ ಆ್ಯಂಡ್ ಸರ್ವಿಸಸ್ ಟ್ಯಾಕ್ಸ್ (ಜಿಎಸ್‌ಟಿ) ಕಾಯಿದೆಯನ್ನು ಮುಂದಿನ ಎ.1ರಿಂದ ಜಾರಿಗೊಳಿಸಲು ಕೇಂದ್ರ ಸರಕಾರ ಉತ್ಸುಕವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಗುರುವಾರ ಸಂಜೆ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಜಿಎಸ್‌ಟಿ ಬಗ್ಗೆ ಕೇಂದ್ರ ಹಣಕಾಸು ಸಚಿವರು ಮುಖ್ಯಸ್ಥರಾಗಿ ಅದರ ಎಲ್ಲಾ ಮಗ್ಗುಲುಗಳನ್ನು ಚರ್ಚಿಸುತ್ತಿದ್ದಾರೆ. ಇದನ್ನು ರಾಜಕೀಯೇತರವಾಗಿ ಸ್ವೀಕರಿಸುವ ಆಶಾವಾದ ವಿದೆ. ಬಹುಶ: ಮುಂದಿನ ಎಪ್ರಿಲ್‌ನಿಂದಲೇ ಇದನ್ನು ಜಾರಿಗೊಳಿಸುವ ವಿಶ್ವಾಸವಿದೆ ಎಂದರು.

ಅಲ್ಲದೇ ಮುಂದಿನ ಸೆಪ್ಟೆಂಬರ್‌ನಲ್ಲಿ ವಿದೇಶಾಂಗ ವ್ಯಾಪಾರ ನೀತಿಯನ್ನು (ಎಫ್‌ಟಿಪಿ) ಪ್ರಕಟಿಸುವ ಸಾಧ್ಯತೆ ಇದೆ ಎಂದರು. ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ರಶ್ಯಾ, ಚೀನಾದೊಂದಿಗೆ ರಫ್ತು ನೀತಿಯನ್ನು ಬಲಪಡಿಸುವ ಇರಾದೆ ವ್ಯಕ್ತಪಡಿಸಿರುವ ಕುರಿತು ಪ್ರಶ್ನಿಸಿದಾಗ, ಅಮೆರಿಕ ಮತ್ತು ಭಾರತ ದೇಶಗಳ ಸಂಬಂಧ ಒಬಾಮಾ ಕಾಲದಿಂದಲೂ ಉತ್ತಮವಾಗಿದೆ. ಅದನ್ನು ಮತ್ತಷ್ಟು ಬಲಪಡಿಸಲಾಗುವುದು. ಸ್ಥಳೀಯತೆಯನ್ನು ಬಲಪಡಿಸುವ ನೀತಿ ಎಲ್ಲಾ ದೇಶಗಳಲ್ಲಿಯೂ ಇದೆ. ಅದರಂತೆ ಅಮೆರಿಕದಲ್ಲಿಯೂ ಇದೆ. ನಮ್ಮ ವಿದೇಶಾಂಗ ವ್ಯಾಪಾರ ನೀತಿಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಸೆಪ್ಟೆಂಬರ್‌ನಲ್ಲಿ ಅದನ್ನು ಪ್ರಕಟಿಸುತ್ತೇವೆ ಎಂದರು. ಅಲ್ಲದೇ ಮುಂದಿನ ಸೆಪ್ಟೆಂಬರ್‌ನಲ್ಲಿ ವಿದೇಶಾಂಗ ವ್ಯಾಪಾರ ನೀತಿಯನ್ನು (ಎಫ್‌ಟಿಪಿ) ಪ್ರಕಟಿಸುವ ಸ್ಯಾದ್ಯತೆ ಇದೆ ಎಂದರು.ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ರಶ್ಯಾ, ಚೀನಾದೊಂದಿಗೆ ರಫ್ತು ನೀತಿಯನ್ನು ಬಲಪಡಿಸುವ ಇರಾದೆ ವ್ಯಕ್ತಪಡಿಸಿರುವ ಕುರಿತು ಪ್ರಶ್ನಿಸಿದಾಗ, ಅಮೆರಿಕ ಮತ್ತು ಭಾರತ ದೇಶಗಳ ಸಂಬಂಧ ಒಬಾಮಾ ಕಾಲದಿಂದಲೂ ಉತ್ತಮವಾಗಿದೆ. ಅದನ್ನು ಮತ್ತಷ್ಟು ಬಲಪಡಿಸಲಾಗುವುದು. ಸ್ಥಳೀಯತೆಯನ್ನು ಬಲಪಡಿಸುವ ನೀತಿ ಎಲ್ಲಾ ದೇಶಗಳಲ್ಲಿಯೂ ಇದೆ. ಅದರಂತೆ ಅಮೆರಿಕದಲ್ಲಿಯೂ ಇದೆ. ನಮ್ಮ ವಿದೇಶಾಂಗ ವ್ಯಾಪಾರ ನೀತಿಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಸೆಪ್ಟೆಂಬರ್‌ನಲ್ಲಿ ಅದನ್ನು ಪ್ರಕಟಿಸುತ್ತೇವೆ ಎಂದರು. ನೋಟಿನ ಅಮಾನ್ಯೀಕರಣದಿಂದ ಉಂಟಾದ ಸಮಸ್ಯೆಗಳು ನಿಧಾನಕ್ಕೆ ಕಡಿಮೆಯಾಗುತ್ತಿವೆ. ಎಲ್ಲಾ ಬ್ಯಾಂಕುಗಳು, ಎಟಿಎಂಗಳಲ್ಲಿ ಹೊಸ ಕರೆನ್ಸಿ ನೋಟುಗಳು ಸಿಗುತ್ತಿವೆ ಎಂದು ಸಚಿವೆ ಸಮರ್ಥಿಸಿಕೊಂಡರು. ಜಲ್ಲಿಕಟ್ಟುವಿಗೆ ಸಂಬಂಧಿಸಿ ತಮಿಳುನಾಡು ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ವ್ಯಕ್ತಡಿಸಿದ್ದಾರೆ.ನ್ಯಾಯಾಲಯದ ತೀರ್ಪು ಏನು ಬರುುದೋ ಕಾದು ನೋಡೋಣ ಎಂದರು.

ಪೇಜಾವರ ಶ್ರೀಗಳ ಭೇಟಿ: ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪರ್ಯಾಯ ಶ್ರೀಪೇಜಾವರ ಮಠಾಧೀಶರೊಂದಿಗೆ ಮಠದ ಅಭಿವೃದ್ಧಿ ಕುರಿತು ಚರ್ಚಿಸಿದ ಸಚಿವೆ, ಶ್ರೀಕೃಷ್ಣಮಠಕ್ಕೆ ಅಗತ್ಯದ ಬೇಡಿಕೆಗಳ ಕುರಿತು ಯೋಜನೆಗಳನ್ನು ಸಲ್ಲಿಸಲು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದರು. ಮುಖ್ಯವಾಗಿ ನೀರು, ಶೌಚಾಲಯ, ಘನತ್ಯಾಜ್ಯ ನಿರ್ವಹಣೆ ಘಟಕದ (ಎಸ್‌ಟಿಪಿ) ಅಗತ್ಯವಿದೆ ಎಂದು ತಿಳಿಸಿದಾಗ,ಜೈವಿಕ ಶೌಚಾಲಯ ನಿರ್ಮಿಸಲು ವಿಸ್ತೃತ ಯೋಜನೆಗಳನ್ನು ಸಲ್ಲಿಸುವಂತೆ ತಿಳಿಸಿದರು. ಎಸ್‌ಟಿಪಿಗೆ ಜಾಗ ಇತ್ಯಾದಿಗಳಿದ್ದರೆ ಅದರ ಕುರಿತೂ ವರದಿ ಸಲ್ಲಿಸಲು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News