ಮುಲ್ಕಿ ಸುಂದರ್ ರಾಮ್ ಶೆಟ್ಟಿ ಸ್ಮಾರಕ ವಾಲಿಬಾಲ್ ಟೂರ್ನಿ : ಆಳ್ವಾಸ್, ಬೆಸೆಂಟ್ ಕಾಲೇಜುಗಳಿಗೆ ಚಾಂಪಿಯನ್ ಟ್ರೋಫಿ
ಶಿರ್ವ, ಜ.12: ಶಿರ್ವದ ಎಂಎಸ್‌ಆರ್‌ಎಸ್ ಕಾಲೇಜಿನಲ್ಲಿ ಇಂದು ನಡೆದ ಮಂಗಳೂರು ವಿವಿ ಮಟ್ಟದ ಪುರುಷ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾಟಗಳಲ್ಲಿ ಮೂಡುಬಿದರೆಯ ಆಳ್ವಾಸ್ ಮತ್ತು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜು ತಂಡಗಳು ಅಂತಿಮ ಪಂದ್ಯಗಳಲ್ಲಿ ಜಯಗಳಿಸಿ ಮೂಲ್ಕಿ ಸುಂದರರಾಮ್ ಶೆಟ್ಟಿ ಸ್ಮಾರಕ ಟ್ರೋಫಿಗಳನ್ನು ಗೆದ್ದುಕೊಂಡವು.
ಅತಿಥೇಯ ಎಂಎಸ್‌ಆರ್‌ಎಸ್ ಕಾಲೇಜು ಪುರುಷರ ವಿಭಾಗದಲ್ಲಿ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡವು. ಈ ಪಂದ್ಯಗಳನ್ನು ವಿಜಯಾ ಬ್ಯಾಂಕ್ ಮತ್ತು ಮುಂಬೈ ಹಳೆವಿದ್ಯಾರ್ಥಿ ಸಂಘಗಳ ಸಹಯೋಗದಲ್ಲಿ ನಡೆಸಲಾಗಿತ್ತು.
ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ವಿಜಯಾ ಬ್ಯಾಂಕ್‌ನ ಪ್ರಬಂಧಕ ಮೆಲ್ವಿನ್ ಪಿಂಟೋ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ನಡೆದ ಸಮಾರೋಪ ಸಮಾರಂದಲ್ಲಿಸ್ಥಳೀಯವಿಜಯಾಬ್ಯಾಂಕ್‌ನಪ್ರಬಂಕ ಮೆಲ್ವಿನ್ ಪಿಂಟೋ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅ್ಯಕ್ಷದಿವಾಕರಶೆಟ್ಟಿಸೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟನೆ:
ಬೆಳಗ್ಗೆ 36ನೇ ವರ್ಷದ ಮಂಗಳೂರು ವಿವಿ ಮಟ್ಟದ ಪುರುಷ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾಟಗಳನ್ನು ವಿಜಯಾ ಬ್ಯಾಂಕಿನ ರೀಜನಲ್ ಮ್ಯಾನೇಜರ್ ಎಂ. ಜೆ. ನಾಗರಾಜ್ ಉದ್ಘಾಟಿಸಿದ್ದರು. ಕಾಲೇಜಿನ ಗ್ರಂಥಾಲಯಕ್ಕೆ ಬ್ಯಾಂಕಿನ ವತಿಯಿಂದ 25,000ರೂ. ದೇಣಿಗೆಯನ್ನು ಘೋಷಿಸಿದರು. ಕಾಲೇಜಿನ ಸಂಚಾಲಕ ವಿ. ಸುಬ್ಬಯ್ಯ ಹೆಗ್ಡೆ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲ ಪ್ರೊ.ವಿನೋಬ್‌ನಾಥ್ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿ ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜ್ಞೇಶ್ ವಂದಿಸಿದರು. ಪ್ರೊ. ಹೇಮಲತಾ ಮತ್ತು ಪ್ರೊ. ಸುಪ್ರೀತಾ ಕಾರ್ಯಕ್ರಮ ನಿರ್ವಹಿಸಿದರು.