ಪುದು-ಮಾರಿಪಳ್ಳ ಸ್ವಲಾತ್ ವಾರ್ಷಿಕ ಹಾಗೂ ಬುರ್‌ದಾ ಮಜ್ಲಿಸ್
ವಿಟ್ಲ,ಜ.12 : ಮಾರಿಪಳ್ಳ ಪುದುಪೇಟೆ ಬದ್ರಿಯ್ಯೀನ್ ಜುಮಾ ಮಸೀದಿ ಇದರ ವತಿಯಿಂದ ಸಂಶುಲ್ ಉಲಮಾ ಇಸ್ಲಾಮಿಕ್ ಪಳ್ಳಿ-ದರ್ಸ್ ಇದರ 17ನೇ ವಾರ್ಷಿಕೋತ್ಸವ, ಸ್ವಲಾತ್ ವಾರ್ಷಿಕ, ಬುರ್‌ದಾ ಮಜ್ಲಿಸ್ ಹಾಗೂ ಸನ್ಮಾನ ಕಾರ್ಯಕ್ರಮವು ಜನವರಿ 13 ರಂದು (ಇಂದು) ಪುದುಪೇಟೆಯ ಸಂಶುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ಕಾಸರಗೋಡು-ಪಾಣಕ್ಕಾಡ್ ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ದಅವಾ ಕಾಲೇಜು ಕಾರ್ಯದರ್ಶಿ ಚೆಂಗಳಂ ಅಬ್ದುಲ್ಲ ಫೈಝಿ ಸ್ವಲಾತ್ ನೇತೃತ್ವ ವಹಿಸಲಿದ್ದು, ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸುವರು. ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಕಾರ್ಯದರ್ಶಿ ಶೈಖುನಾ ಪ್ರೊ. ಅಲಿಕುಟ್ಟಿ ಮುಸ್ಲಿಯಾರ್ ಹಾಫಿಳ್ ವಿದ್ಯಾರ್ಥಿಗಳನ್ನು ಸನ್ಮಾನಿಸುವರು. ಹಾಫಿಳ್ ಇ.ಕೆ. ಅಬೂಬಕ್ಕರ್ ನಿಝಾಮಿ ಮಲೇಶ್ಯಾ ಮುಖ್ಯ ಭಾಷಣಗೈಯುವರು.
ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವ ಯು.ಟಿ. ಖಾದರ್, ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಶ್ಯಾ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸ್ಥಳೀಯ ಮಸೀದಿ ಅಧ್ಯಕ್ಷ ಸಿ. ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.