ಜ.16: ಸ್ಕಿಲ್‌ಗೇಮ್, ಮಸಾಜ್ ಪಾರ್ಲರ್ ಮುಚ್ಚಲು ಒತ್ತಾಯಿಸಿ ಧರಣಿ
Update: 2017-01-13 00:20 IST
ಮಂಗಳೂರು, ಜ.12: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯೊಳಗೆ ಸ್ಕಿಲ್‌ಗೇಮ್, ವೀಡಿಯೊಗೇಮ್, ಜುಗಾರಿ ಅಡ್ಡ, ಮಸಾಜ್ ಪಾರ್ಲರ್‌ಗಳು ರಾಜಾರೋಷವಾಗಿ ಕಾರ್ಯಾಚರಿಸುತ್ತಿವೆ. ರಿಕ್ರಿಯೇಶನ್ಸ್ ಕ್ಲಬ್‌ನ ಹೆಸರಿನಲ್ಲಿ ಪರವಾನಿಗೆ ಪಡೆದು ಅಕ್ರಮವಾಗಿ ಜೂಜು ಕೇಂದ್ರಗಳನ್ನು ನಡೆಸಿ ಮೋಸದಾಟಕ್ಕೆ ಜನರನ್ನು ಬಲಿ ಪಡೆಯುತ್ತಿದೆ. ನಿಯಮಗಳನ್ನು ಮೀರಿ ಇವುಗಳು ಕಾರ್ಯಾಚರಿಸುತ್ತಿವೆ. ಇದನ್ನು ಶಾಶ್ವತವಾಗಿ ಮುಚ್ಚುವಂತೆ ಆಗ್ರಹಿಸಿ ಜ.16ರ ಬೆಳಗ್ಗೆ 10:30ಕ್ಕೆ ಮಿನಿ ವಿಧಾನಸೌಧದಿಂದ ಮೆರವಣಿಗೆ ಹೊರಟು ಜಿಲ್ಲಾಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಡಿವೈಎ್ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.