ಜ.15: ವೃಂದಾವನ ವಸತಿ ಸಮುಚ್ಚಯ ಉದ್ಘಾಟನೆ

Update: 2017-01-12 18:52 GMT

ಮಂಗಳೂರು, ಜ.12: ನಿ ಬಿಲ್ಡರ್ ಮತ್ತು ಡೆವಲಪರ್ಸ್‌ ಸಂಸ್ಥೆಯ ವತಿಯಿಂದ ನಗರದ ಮಣ್ಣಗುಡ್ಡೆ ಬಳಿ ನಿರ್ಮಿಸಲಾದ ‘ವೃಂದಾವನ’ ವಸತಿ ಸಮುಚ್ಚಯ ಜ.15ರಂದು ಸಂಜೆ 6:30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಪ್ರವರ್ತಕ ಪ್ರಶಾಂತ್ ಕುಮಾರ್ ಸನಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸಮುಚ್ಚಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಆಹಾರ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಜೆ.ಆರ್.ಲೋಬೊ, ಕ್ಯಾ.ಗಣೇಶ್ ಕಾರ್ಣಿಕ್, ಮೇಯರ್ ಹರಿನಾಥ್, ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಕೋಟ್ಯಾನ್, ಮನಪಾ ಸದಸ್ಯೆ ಜಯಂತಿ ಆಚಾರ್, ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಬ್ರಹ್ಮ ಕುಮಾರೀಸ್ ಮಂಗಳೂರು ಇದರ ಮುಖ್ಯಸ್ಥೆ ಬಿ.ಕೆ.ವಿಶ್ವೇಶ್ವರಿ ಆಶೀರ್ವದಿಸಲಿದ್ದಾರೆ.

ಮಣ್ಣಗುಡ್ಡೆಯ ಸುಮಾರು 1.7 ಎಕರೆ ವಿಸ್ತೀರ್ಣದಲ್ಲಿ ವಿಶ್ವ ದರ್ಜೆಯ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿರುವ ‘ವೃಂದಾವನ’ ವಸತಿ ಸಮುಚ್ಚಯ ಉತ್ಕೃಷ್ಟ ಗುಣ ಮಟ್ಟದ 2 ಬಿಎಚ್‌ಕೆ, 3 ಬಿಎಚ್‌ಕೆಯ 109 ಯೂನಿಟ್‌ಗಳನ್ನು ಹೊಂದಿದ್ದು, 4 ಶುದ್ಧ ನೀರಿನ ಘಟಕಗಳು, ಕೊಳವೆ ಬಾವಿ, ನಳ್ಳಿ ನೀರಿನ ಸಂಪರ್ಕ, ತ್ಯಾಜ್ಯ ನೀರು ಸಂಸ್ಕರಣಾ ಘಟಕ, ಹವಾನಿಯಂತ್ರಿತ ಒಳಾಂಗಣ, ಬಿಲಿಯರ್ಡ್ಸ್ ಕೇರಂ ಲೂಡೋ ಹಾಗೂ ಚೆಸ್ ಸೇರಿದಂತೆ ವಿವಿಧ ಕ್ರೀಡಾ ವ್ಯವಸ್ಥೆ, ಯೋಗ ಧ್ಯಾನದ ಕೊಠಡಿಗಳು, ಜಿಮ್, ಈಜುಕೊಳ, ಆ್ಯಂಪಿಥಿಯೇಟರ್‌ಜಾಗಿಂಗ್ ಪಾರ್ಕ್, ಹಿರಿಯ ನಾಗರಿಕರಿಗೆ ಮಿನಿ ಉದ್ಯಾನವನವನ್ನು ಒಳಗೊಂಡಿದೆ.

ಲಕ್ಸುರಿ ಮನೆಗಳ ವಿನ್ಯಾಸ, ಮಕ್ಕಳ ಆಟದ ಅಂಗಳ, ಗರಿಷ್ಠ ಸುರಕ್ಷತೆ, ಪ್ರತಿಯೊಂದು ್ಲಾಟ್‌ಗೂ ಸೆನ್ಸಾರ್ ಸಿಸ್ಟಮ್‌ನ ಪ್ರವೇಶದ್ವಾರ, 77 ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ವಸತಿ ಸಮುಚ್ಚಯದ ಸಮೀಪದಲ್ಲೇ ಧಾರ್ಮಿಕ ಕೇಂದ್ರಗಳು, ಸಾರ್ವಜನಿಕ ಉದ್ಯಾನವನ, ಕ್ರೀಡಾಂಗಣ, ಕೇಂದ್ರ ಬಸ್‌ನಿಲ್ದಾಣ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸುಮಾರು 3 ಕಿ.ಮೀ. ದೂರದಲ್ಲಿ ರೈಲು ನಿಲ್ದಾಣವಿದೆ. ಗ್ರಾಹಕರಿಗೆ ಗರಿಷ್ಠ ಸಂತೃಪ್ತಿ ನೀಡುವುದು ನಮ್ಮ ಗುರಿಯಾಗಿದೆ ಎಂದು ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ಯೋಜನೆಯ ನಿರ್ಮಾತೃಗಳಾದ ಪ್ರಶಾಂತ್ ಕುಮಾರ್ ಸನಿಲ್, ಶರಶ್ಚಂದ್ರ ಸನಿಲ್ ಸಹೋದರರು ಬಿಜೈಯಲ್ಲಿರುವ ನಿ ಲ್ಯಾಂಡ್ ಇನ್‌ರ್ಾಸ್ಟಕ್ಚರ್ ಡೆವಲಪರ್ಸ್‌ ಸಂಸ್ಥೆಯನ್ನು ಹೊಂದಿದ್ದು, ಕಟ್ಟಡ ನಿರ್ಮಾಣ ಕ್ಷೇತ್ರದ ತಜ್ಞರ ತಂಡವನ್ನು ಹೊಂದಿದೆ. ಹೆಚ್ಚಿನ ವಿವರಗಳನ್ನು ಡಿಡಿಡಿ.್ಞಜಿಜ್ಝಿಚ್ಞ.್ಚಟಞ ಸಂಪರ್ಕಿಸಿ ಪಡೆಯಬಹುದು ಎಂದವರು ತಿಳಿಸಿದ್ದಾರೆ.

ಸಂಸ್ಥೆಯ ಯೋಜನಾ ನಿರ್ದೇಶಕ ಕಿಶೋರ್ ಪಿ., ಕಾನೂನು ಸಲಹೆಗಾರ್ತಿ ನಯನಾ ಪೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News