×
Ad

15ರಂದು ಶಿಕ್ಷಕರ ಅರ್ಹತಾ ಪರೀಕ್ಷೆ

Update: 2017-01-13 00:27 IST

ಮಂಗಳೂರು, ಜ.12: ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯು ಜ.15ರಂದು ರಾಜ್ಯಾದ್ಯಂತ ನಡೆಯಲಿದೆ. ದ.ಕ. ಜಿಲ್ಲೆಯಲ್ಲಿ ಈ ಪರೀಕ್ಷೆ ಬೆಳಗ್ಗೆ ಮಿಲಾಗ್ರಿಸ್ ಪಪೂ ಕಾಲೇಜು ಹಂಪನಕಟ್ಟ, ಲೇಡಿಹಿಲ್ ವಿಕ್ಟೋರಿಯ ಬಾಲಕಿಯರ ಪ್ರೌ.ಶಾಲೆ, ಕೆನರಾ ಪ್ರೌ.ಶಾಲೆ, ಪದುವ ಪ್ರೌ.ಶಾಲೆ ನಂತೂರು ಇಲ್ಲಿ ನಡೆಯಲಿದೆ. ಅಪರಾಹ್ನ 8 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.

ಮಿಲಾಗ್ರಿಸ್ ಪಪೂ ಕಾಲೇಜು ಹಂಪನಕಟ್ಟ, ಲೇಡಿಹಿಲ್ ವಿಕ್ಟೋರಿಯ ಬಾಲಕಿಯ ಪ್ರೌಢ ಶಾಲೆ, ಲೇಡಿಹಿಲ್ ವಿಕ್ಟೋರಿಯ ಬಾಲಕಿಯರ ಪ್ರೌ.ಶಾಲೆ, ಕೆನರಾ ಪ್ರೌ.ಶಾಲೆ, ಉರ್ವಾ ಮಂಗಳೂರು, ಪದುವ ಪ್ರೌಢಶಾಲೆ ನಂತೂರು, ಸೈಂಟ್ ಆನ್ಸ್ ಪ್ರೌಢ ಶಾಲೆ, ಮಂಗಳೂರು, ಸೈಂಟ್ ಮೇರಿ ಬಾಲಕಿಯರ ಪ್ರೌಢ ಶಾಲೆ ಳ್ನೀರ್, ಕಪಿತಾನಿಯೊ ಪ್ರೌಢ ಶಾಲೆ ಕಂಕನಾಡಿಗಳಲ್ಲಿ ನಡೆಯಲಿವೆ. ಪರೀಕ್ಷೆಗೆ ಹಾಜರಾಗಲು ಪೂರ್ವಾಹ್ನ 1387 ಮತ್ತು ಅಪರಾಹ್ನ 2364 ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಟಿಇಟಿ ಪರೀಕ್ಷೆಯ ಪ್ರಥಮ ಪತ್ರಿಕೆಯು ಪೂರ್ವಾಹ್ನ 9ರಿಂದ 12 ರವರೆಗೆ ಮತ್ತು ದ್ವಿತೀಯ ಪತ್ರಿಕೆ ಅಪರಾಹ್ನ 1:30ರಿಂದ 4.30ರವರೆಗೆ ನಡೆಯಲಿದೆ. ಹಾಜರಾಗುವ ಎಲ್ಲ ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ಹಂಚಿಕೆ ಮಾಡಲಾದ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪತ್ರದೊಂದಿಗೆ ಕ್ಲಪ್ತ ಸಮಯದಲ್ಲಿ ಹಾಜರಾ ಗುವಂತೆ ಸೂಚಿಸಿದೆ. ಉತ್ತಮ ರೀತಿ ಪರೀಕ್ಷೆ ನಡೆಸುವ ಬಗ್ಗೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಹಾಗೂ ಸ್ಥಾನಿಕ ಜಾಗೃತ ದಳದ ಅಕಾರಿಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News