×
Ad

ಬಿ ಎಸ್ ಎಫ್ ಯೋಧನ ವೈರಲ್ ವೀಡಿಯೊದಿಂದ ಎಚ್ಚೆತ್ತ ರಕ್ಷಣಾ ಸಚಿವರಿಂದ ಮಹತ್ವದ ಆದೇಶ

Update: 2017-01-13 11:48 IST

ಗಾಂಧಿನಗರ,ಜ.13: ಗಡಿ ಪ್ರದೇಶಗಳಲ್ಲಿ ಬಿ ಎಸ್ ಎಫ್ ಯೋಧರಿಗೆ ಪೂರೈಸಲಾಗುತ್ತಿರುವ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ಬಿಎಸ್ ಎಫ್ ಯೋಧನೊಬ್ಬ ದೂರುವ ವೀಡಿಯೋ ಇತ್ತೀಚೆಗೆ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಗುರುವಾರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಹೇಳಿಕೆಯೊಂದನ್ನು ನೀಡಿ ಭಾರತೀಯ ಸೇನೆಗೆ ಪೂರೈಕೆಯಾಗುವ ಆಹಾರಗಳನ್ನು ತಾನು ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ಹಾಗೂ ಎಲ್ಲಾ ಘಟಕಗಳಿಗೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ( ಎಫ್‌ಎಸ್‌ಎಸ್‌ಎಐ) ಪ್ರಮಾಣೀಕರಿಸಲ್ಪಟ್ಟ ಶೀತಲೀಕೃತ ಕೋಳಿ ಮಾಂಸ ಒದಗಿಸಲಾಗುವುದು ಎಂದು ಹೇಳಿದರು.

ಸಚಿವರು ವೈಬ್ರೆಂಟ್ ಗುಜರಾತ್ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಬಿ ಎಸ್ ಎಫ್ ಯೋಧ ತೇಜ್ ಬಹಾದುರ್‌ಯಾದವ್ ಆವರ ವೈರಲ್ ವೀಡಿಯೊ ಬಗ್ಗೆ ಕೇಳಿದಾಗ ‘‘ಬಿಎಸ್ ಎಫ್ ಗೃಹ ಇಲಾಖೆಯ ಅಧೀನದಲ್ಲಿ ಬರುವುದರಿಂದ ನಾನು ಹೆಚ್ಚಿಗೇನೂ ಹೇಳಲು ಸಾಧ್ಯವಿಲ್ಲ. ಆದರೆ ಸೈನ್ಯದ ವಿಚಾರದಲ್ಲಿ ಕಳೆದೆರಡು ವರ್ಷಗಳಿಂದ ಯೋಧರಿಗೆ ನೀಡಲಾಗುವ ಆಹಾರದಿಂದ ಅವರಿಗೆ ಸಮಾಧಾನವಿದೆಯೇ ಇಲ್ಲವೇ ಎಂಬ ಬಗ್ಗೆ ನಾನು ವೈಯಕ್ತಿಕವಾಗಿ ಗಮನ ನೀಡುತ್ತಿದ್ದೇನೆ,’’ ಎಂದರು.

2012-13ನೆ ಸಾಲಿನ ಸಿಎಜಿ ವರದಿಯಲ್ಲಿ ಕೆಲ ವಿಚಾರಗಳನ್ನು ಉಲ್ಲೇಖಿಸಲಾಗಿದ್ದು ಈ ಬಗ್ಗೆ ಸುಧಾರಣೆಗಳನ್ನು ತರಲು ನಾವು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ 26 ಘಟಕಗಳಿಗೆ ಶೀತಲೀಕೃತ ಕೋಳಿ ಮಾಂಸವನ್ನು ಪೂರೈಸಲಾಗಿದ್ದು ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಎಲ್ಲಾ ಘಟಕಗಳಿಗೆ ಪೂರೈಸಲಾಗುವುದು. ಇದರಿಂದಾಗಿ ಯೋಧರಿಗೆ ನೀಡಲಾಗುವ ಆಹಾರದ ಗುಣಮಟ್ಟ ತನ್ನಿಂತಾನಾಗಿಯೇ ಸುಧಾರಿಸುವುದು,’’ ಎಂದು ಸಚಿವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News