×
Ad

ಟಾಟಾ ಗ್ರೂಪ್ ನ ಪ್ರಪ್ರಥಮ ಪಾರ್ಸಿಯೇತರ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್

Update: 2017-01-13 12:37 IST

ಮುಂಬೈ ,ಜ.13:ಗುರುವಾರದಂದು ಟಾಟಾ ಸನ್ಸ್ ಅಧ್ಯಕ್ಷರಾಗಿಆಯ್ಕೆಯಾಗಿರುವ ನಟರಾಜನ್ ಚಂದ್ರಶೇಖರನ್ ಈ ಪ್ರಮುಖ ಸಂಸ್ಥೆಯ ಪ್ರಪ್ರಥಮ ಪಾರ್ಸಿಯೇತರ ಅಧ್ಯಕ್ಷನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮಆತ್ಮೀಯ ವಲಯದಲ್ಲಿ ಚಂದ್ರ ಎಂದೇ ಕರೆಯಲ್ಪಡುವ ನಟರಾಜನ್ ಚಂದ್ರಶೇಖರನ್ ಬಗ್ಗೆ ನಾವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ ಓದಿ.

► ಚಂದ್ರಶೇಖರನ್ ಅವರು ಅಕ್ಟೋಬರ್ 6, 2009ರಿಂದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಇದರಸಿಇಒ ಮತ್ತು ಆಡಳಿತ ನಿರ್ದೇಶಕರಾಗಿದ್ದಾರೆ. ಅದಕ್ಕಿಂತ ಮೊದಲು ಅವರು ಸಂಸ್ಥೆಯ ಚೀಫ್ ಆಪರೇಟಿಂಗ್ ಆಫೀಸರ್ ಆಗಿದ್ದರು.

► ಸೆಪ್ಟೆಂಬರ್ 6, 2007ರಲ್ಲಿ ಅವರು ಟಿ ಸಿ ಎಸ್ ನ ಕಾರ್ಯಕಾರಿ ನಿರ್ದೇಶಕರಾದರು. ಇದಕ್ಕೂ ಮುಂಚೆ 2002ರಲ್ಲಿ ಅವರು ಕಂಪೆನಿಯ ಜಾಗತಿಕ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾಗಿದ್ದರು.

► ಈ ಹಿಂದೆ ಸಿಟಿಗ್ರೂಪ್ ಗ್ಲೋಬಲ್ ಸರ್ವಿಸಸ್ ಲಿ. ಎಂದು ಕರೆಯಲ್ಪಡುತ್ತಿದ್ದ ಟಿ ಸಿ ಎಸ್ ಇ-ಸರ್ವ್ ಲಿ. ಇದರನಾನ್-ಎಕ್ಸಿಕ್ಯೂಟಿವ್ ಚೇರ್‌ಮೆನ್ ಆಗಿದ್ದರು. ನಂತರ ಡಿಸೆಂಬರ್ 21, 2008ರಿಂದ ಅದರ ನಿರ್ದೇಶಕರಾಗಿದ್ದಾರೆ.

► ಅವರು ಅಕ್ಟೋಬರ್ 17,2014ರಿಂದ ಸಿಎಂಸಿ ಲಿಮಿಟೆಡ್ ಇದರ ಅಧ್ಯಕ್ಷ ಹಾಗೂ ಹೆಚ್ಚುವರಿ ನಿರ್ದೇಶಕರಾಗಿದ್ದಾರೆ. ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟ್ ವೇರ್ ಎಂಡ್ ಸರ್ವಿಸ್ ಕಂಪೆನೀಸ್ ಇದರ ಅಧ್ಯಕ್ಷ ಹಾಗೂಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಎಪ್ರಿಲ್ 8,2013ರ ತನಕ ಸೇವೆ ಸಲ್ಲಿಸಿದ್ದಾರೆ.

► ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದರ ಅಧಿಕಾರಿಯೇತರನಿದೇರ್ಶಕರಾಗಿ ಮಾರ್ಚ್ 5, 2016ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

► 25 ಅಕ್ಟೋಬರ್, 2016ರಿಂದ ಚಂದ್ರಶೇಖರನ್ ಟಾಟಾ ಸನ್ಸ್ ಲಿ. ಇದರ ಹೆಚ್ಚುವರಿ ನಿರ್ದೇಶಕರಾಗಿದ್ದಾರೆ.

► ಕೊಯಂಬತ್ತೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಲ್ಲಿ ಅಪ್ಲೈಡ್ ಸಾಯನ್ಸ್ ವಿಷಯದಲ್ಲಿ ವಿಜ್ಞಾನ ಪದವಿ ಪಡೆದಿರುವ ಚಂದ್ರಶೇಖರನ್ ಅವರು ತಮಿಳುನಾಡಿನ ತಿರುಚ್ಚಿಯಲ್ಲಿರುವ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಅಪ್ಲಿಕೇಶನ್ಸ್ ನಲ್ಲಿ 1986ರಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದಾರೆ.

► ದೈಹಿಕ ಕ್ಷಮತೆ ಕಾಪಾಡಲು ಹೆಚ್ಚಿನ ಆಸಕ್ತಿ ವಹಿಸಿರುವ ಚಂದ್ರಶೇಖರನ್ ಪ್ರತಿ ದಿನ ವ್ಯಾಯಾಮದಂಗವಾಗಿ ಓಡುವ ಹವ್ಯಾಸ ಇಟ್ಟುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News