×
Ad

ಜ.15ರಂದು ಬಿಐಟಿ ಆ್ಯಂಡ್ ಬೀಡ್ಸ್ ವತಿಯಿಂದ ಗ್ರ್ಯಾಂಡ್ ಕ್ವೆಸ್ಟ್-2017 ಸ್ಪರ್ಧೆ

Update: 2017-01-13 15:06 IST

ಮಂಗಳೂರು, ಜ.13: ಬ್ಯಾರೀಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ) ಹಾಗೂ ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್(ಬೀಡ್ಸ್)  ಜಂಟಿಯಾಗಿ 'ಕಲ್ಪನೆ, ನಾವೀನ್ಯತೆ, ಆವಿಷ್ಕಾರ’ ಎಂಬ ಧ್ಯೇಯ ವಾಕ್ಯದೊಂದಿಗೆ "ಗ್ರ್ಯಾಂಡ್ ಕ್ವೆಸ್ಟ್-2017’ ಕಾರ್ಯಕ್ರಮವನ್ನು ಜ.15ರಂದು ಬೆಳಗ್ಗೆ ಮಂಗಳೂರಿನ ಬ್ಯಾರೀಸ್ ನೋಲೆಡ್ಜ್ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ. 

ಈ ಕಾರ್ಯಕ್ರಮದಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಎಸೆಸ್ಸೆಲ್ಸಿ, ಪಿಯುಸಿ ವಿಜ್ಞಾನ ವಿಭಾಗದವರು ಭಾಗವಹಿಸಬಹುದಾಗಿದೆ. ಸೈಯನ್ಸ್ ಫೇರ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ರೂ.15000 ನಗದು, ದ್ವಿತೀಯ ಬಹುಮಾನ ರೂ.10,000ನಗದು, ತೃತೀಯ ಬಹುಮಾನ ರೂ.5000 ನಗದು ನೀಡಲಾಗುವುದು.

ಸೈಯನ್ಸ್ ಟೆಕ್ ಕ್ವಿಝ್ ಸ್ಪರ್ಧೆಯ ವಲಯ ಸುತ್ತಿನಲ್ಲಿ ಪ್ರಥಮ ಬಹುಮಾನ ರೂ.3000ನಗದು, ದ್ವಿತೀಯ ರೂ.2000ನಗದು, ತೃತೀಯ ಬಹುಮಾನ ರೂ.1000 ನಗದು. ಅಂತಿಮ ಸುತ್ತಿನಲ್ಲಿ ಪ್ರಥಮ ಬಹುಮಾನವಾಗಿ ರೂ.15,000ರೂ. ನಗದು, ದ್ವಿತೀಯ ರೂ.10,000 ನಗದು, ತೃತೀಯ ರೂ.5000 ನಗದು ಬಹುಮಾನ ನೀಡಲಾಗುವುದು.

 ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ರೂ.10,000 ನಗದು, ದ್ವಿತೀಯ ರೂ.5000 ನಗದು, ತೃತೀಯ ರೂ.2500 ನಗದು ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕರನ್ನು ದೂರವಾಣಿ, ಎಸ್ಸೆಮ್ಮೆಸ್ ಹಾಗೂ ವಾಟ್ಸ್ ಆಪ್ ಮೂಲಕ ಸಂಪರ್ಕಿಸಬಹುದಾಗಿದೆ. ಮೊ: 7259661177, 7259667744 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News