ಬೆಳ್ತಂಗಡಿ: ಮಿತ್ತಬಾಗಿಲು ಗ್ರಾ.ಪಂಗೆ ಎಸಿಬಿ ದಾಳಿ
Update: 2017-01-13 15:27 IST
ಬೆಳ್ತಂಗಡಿ, ಜ.13: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾ.ಪಂಗೆ ಮಂಜುಳಾ ಎಂಬವರ ದೂರಿನ ಹಿನ್ನೆಲೆಯಲ್ಲಿ ಎಸಿಬಿ ದಾಳಿ ನಡೆಸಿರುವ ಘಟನೆ ಇಂದು ನಡೆದಿದೆ.
ಉದ್ಯೋಗ ಖಾತ್ರಿ ಯೋಜನೆಯ ಹೆಸರಿನಲ್ಲಿ ಲಕ್ಷಗಟ್ಟಲೇ ಹಣ ವಂಚನೆ ಮಾಡಿದ ಆರೋಪದಡಿ ಎಸಿಬಿ ದಾಳಿ ನಡೆಸಿದ್ದು, 2012ರಿಂದ 2016ರವರೆಗಿನ ಉದ್ಯೋಗ ಖಾತ್ರಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಗ್ರಾ.ಪಂ ಉಪಾಧ್ಯಕ್ಷ, ಪಿಡಿಓ ಸೇರಿದಂತೆ ಕೆಲ ಸದಸ್ಯರ ವಿಚಾರಣೆಯನ್ನು ಎಸಿಬಿ ನಡೆಸಿದೆ ಎಂದು ತಿಳಿದು ಬಂದಿದೆ.
ಕಾರ್ಯಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಸುಧೀರ್ ಹೆಗ್ಡೆ, ಇನ್ ಸ್ಪೆಕ್ಟರ್ ಯೋಗೀಶ್ ಇದ್ದರು.