×
Ad

ಸತತ 22 ಗಂಟೆ ಸ್ಯಾಮ್ಸಂಗ್ ಮುಖ್ಯಸ್ಥನ ವಿಚಾರಣೆ

Update: 2017-01-13 15:43 IST

ಸಿಯೋಲ್, ಜ.13: ಪದಚ್ಯುತಗೊಂಡಿರುವ ದಕ್ಷಿಣ ಕೊರಿಯ ಅಧ್ಯಕ್ಷೆ ಪಾರ್ಕ್ ಜಿಯುನ್ ಹೈ ಅವರು ಶಾಮೀಲಾಗಿದ್ದಾರೆನ್ನಲಾದ ಬೃಹತ್ ಹಗರಣದ ಸಂಬಂಧ ವಿಶ್ವವಿಖ್ಯಾತ ಸ್ಯಾಮ್ಸಂಗ್ ಕಂಪೆನಿಯ ಮುಖ್ಯಸ್ಥ ಜೇ ವೈ ಲೀ ಅವರನ್ನುಸತತ 22 ಗಂಟೆಗಳ ಕಾಲ ಅಧಿಕಾರಿಗಳು ಗುರುವಾರ ವಿಚಾರಣೆ ನಡೆಸಿದ್ದಾರೆ. ಆದರೆ ಇಷ್ಟೊಂದು ಸತತ ವಿಚಾರಣೆಯ ನಂತರವೂ 48 ವರ್ಷದ ಲೀ ಅವರು ವಿಚಲಿತರಾಗಿದ್ದಂತೆ ಕಂಡು ಬಂದಿಲ್ಲ. ವಿಚಾರಣೆಯ ಸಂದರ್ಭ ಅವರಿಗೆ 5 ಡಾಲರ್ ವೆಚ್ಚದ ಊಟ ನೀಡಲಾಗಿತ್ತೆನ್ನಲಾಗಿದ್ದು ಅವರು ಅಷ್ಟೂ ಹೊತ್ತು ನಿದ್ದೆಗೆಟ್ಟು ವಿಚಾರಣೆಯೆದುರಿಸಿದ್ದರೆಂದು ತಿಳಿದು ಬಂದಿದೆ.

ಲೀ ಅವರನ್ನು ಇಬ್ಬರು ಪ್ರಾಸಿಕ್ಯೂಟರುಗಳು ವಿಚಾರಣೆ ನಡೆಸಿದ್ದು ಅವರಲ್ಲೊಬ್ಬರಾದ ಹ್ಯಾನ್ ಡಾಂಗ್ ಹೂನ್ ಅವರ ಅಡ್ಡ ಹೆಸರುಚಾಯಿಬೊಲ್ ಸ್ನೈಪರ್ ಎಂದಾಗಿತ್ತೆನ್ನಲಾಗಿದೆ. ವಿಚಾರಣೆ ಸಂದರ್ಭ ಲೀ ಅವರ ವಕೀಲರೂ ಉಪಸ್ಥಿತರಿದ್ದರು

ಸ್ಯಾಮ್ಸಂಗ್ ನ ಎರಡು ಸಂಯೋಜಿತ ಸಂಸ್ಥೆಗಳ ವಿಲೀನಕ್ಕೆ ದೇಶದ ರಾಷ್ಟ್ರೀಯ ಪಿಂಚಣಿ ನಿಧಿಯ ಬೆಂಬಲಕ್ಕಾಗಿ ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷೆಯ ಸ್ನೇಹಿತ ಚೊಯ್‌ಸೂನ್-ಸಿಲ್‌ಅವರ ಮಾಲಕತ್ವದ ಉದ್ಯಮಕ್ಕೆ 25.46 ಮಿಲಿಯನ್ ಡಾಲರ್ ನೀಡಿದ್ದರೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗಿದೆ. ಬುಧವಾರವಷ್ಟೇ ಲೀ ಅವರನ್ನು ಈ ಪ್ರಕರಣದಲ್ಲಿ ಶಂಕಿತರೆಂದು ಹೆಸರಿಸಲಾಗಿತ್ತು ಹಾಗೂ ಮರುದಿನ ಬೆಳಿಗ್ಗೆ ಅವರನ್ನು ವಿಚಾರಣೆಗಾಗಿ ಕರೆಸಲಾಗಿತ್ತು.

ಚೊಯ್ ಒಡೆತನದ ಸಂಸ್ಥೆಸೇರಿದಂತೆ ಎರಡು ಸಂಸ್ಥೆಗಳಿಗೆ ಹಣ ಒದಗಿಸಿರುವ ಕುರಿತು ಸ್ಯಾಮ್ಸಂಗ್ ಒಪ್ಪಿದ್ದರೂಸ್ಯಾಮ್ಸಂಗ್ ತಾನು ಸಿ & ಟಿ ಕಾರ್ಪ್ ಮತ್ತು ಚೇಲ್ ಇಂಡಸ್ಟ್ರೀಸ್ ಇಂಕ್‌ವ ವಿಲೀನಕ್ಕಾಗಿ ಒತ್ತಡ ಹೇರಿಲ್ಲ ಎಂದು ವಾದಿಸಿತ್ತು.

ತರುವಾಯ ಪದಚ್ಯುತ ಅಧ್ಯಕ್ಷೆ ಪಾರ್ಕ್‌ಹಾಗೂ ಬಂಧನದಲ್ಲಿರುವ ಚೊಯ್ ಕೂಡ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News