ಕಾಸರಗೋಡು: ಬಾವಿಗೆ ಹಾರಿ ಆತ್ಮಹತ್ಯೆಗೆತ್ನಿಸಿದ ಶಾಲಾ ಬಾಲಕ
Update: 2017-01-13 16:11 IST
ಕಾಸರಗೋಡು, ಜ.13: ಶಿಕ್ಷಕ ನಿಂದಿಸಿರುವುದಾಗಿ ಆರೋಪಿಸಿ ಎಂಟನೆ ತರಗತಿ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆಗೆತ್ನಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಪರವನಡ್ಕದಲ್ಲಿ ನಡೆದಿದೆ.
ಘಟನೆ ಬಳಿಕ ರೊಚ್ಚಿಗೆದ್ದ ಕೆಲ ವಿದ್ಯಾರ್ಥಿಗಳು ಶಾಲೆಯಲ್ಲಿ ದಾಂಧಲೆ ನಡೆಸಿದ್ದ ಪರಿಣಾಮ ಗಾಜು ತಗಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪರವನಡ್ಕದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಎಂಟನೆ ತರಗತಿ ವಿದ್ಯಾರ್ಥಿ ಆಲ್ ಹದ್ (14 ) ಎಂಬಾತನನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯಿಂದ ಓಡಿದ ವಿದ್ಯಾರ್ಥಿ ಸಮೀಪವಿದ್ದ ಬಾವಿಗೆ ಹಾರಿದ್ದು ಇದನ್ನು ಗಮನಿಸಿದ ವಿದ್ಯಾರ್ಥಿಗಳು, ಸ್ಥಳೀಯರು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರು.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ