ಗಾಂಧಿ ಚರಕದೊಂದಿಗೆ ಪ್ರಧಾನಿ ಮೋದಿ: ಬಿಜೆಪಿ ಸಮರ್ಥನೆ
Update: 2017-01-13 17:22 IST
ಹೊಸದಿಲ್ಲಿ, ಜ.13: ಗಾಂಧೀಜಿಯವರ ಸ್ಥಾನ ಪಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾವೆಲ್ಲರೂ ಒಟ್ಟಾಗಿರುವುದು ಗಾಂಧಿ ತತ್ವದ ಮೇಲೆ. ಗಾಂಧೀಜಿ ಹೆಸರನ್ನು ಒಂದು ಕುಟುಂಬವು ರಾಜಕಾರಣಕ್ಕೆ ಬಳಸಿಕೊಂಡಿದೆ. ನಾವು ಪ್ರತಿ ವೇದಿಕೆಯಲ್ಲೂ ಗಾಂಧೀಜಿಗೆ ಗೌರವ ನೀಡುತ್ತಿದ್ದೇವೆ. ಅವರು ನಮ್ಮ ಕೆಲಸ-ತತ್ವದಲ್ಲಿದ್ದಾರೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.
ಗಾಂಧೀಜಿಯ ಚರಕದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪೋಸ್ ಕೊಟ್ಟ ಚಿತ್ರ ಕ್ಯಾಲೆಂಡರ್‌ವೊಂದಲ್ಲಿ ಪ್ರಕಟಗೊಂಡಿದ್ದು, ಪ್ರತಿಪಕ್ಷಗಳು ಮೋದಿ ಅವರು ಗಾಂಧಿ ಸ್ಥಾನ ಪಡೆದಿದ್ದಾರೆಂದು ಟೀಕೆ ವ್ಯಕ್ತಪಡಿಸಿದ್ದವು. ಮೋದಿ ಅವರು ಚರಕದೊಂದಿಗೆ ಪೋಸ್ ನೀಡಿರುವ ಚಿತ್ರಕ್ಕೆ ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.