ಚರ್ಚಾಸ್ಪರ್ಧೆಯಲ್ಲಿ ಗಣೇಶ ಸುಬ್ಬಣ್ಣವರ ಪ್ರಥಮ
Update: 2017-01-13 17:44 IST
ಮುಂಡಗೋಡ , ಜ.13 : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯ ಮುಂಡಗೋಡ ವತಿಯಿಂದ ನಡೆದ ಮೌಲ್ಯಯುತ ಸಮಾಜ ನಿರ್ಮಾಣದಲ್ಲಿ ಆಧ್ಯಾತ್ಮ ಮುಖ್ಯವೋ, ವಿಜ್ಞಾನವೋ ಎಂಬ ವಿಷಯದ ಕುರಿತು ಚರ್ಚಾಸ್ಪರ್ಧೆಯಲ್ಲಿ ಆದಿಜಾಂಭವ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕುಮಾರ ಗಣೇಶ ಸುಬ್ಬಣ್ಣವರ ಪ್ರಥಮ ಸ್ಥಾನ ಹಾಗೂ ಕುಮಾರಿ ಸ್ನೇಹಾ ದಾಸರ ತೃತಿಯ ಸ್ಥಾನ ಪಡೆದಿರುವ ಮೂಲಕ ಶಾಲೆಯ ಕೀರ್ತಿ ಗೌರವಗಳನ್ನು ಹೆಚ್ಚಿಸಿದ್ದಾರೆ.
ಶಾಲೆಗೆ ಕೀರ್ತಿ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಆದಿಜಾಂಬವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಫಕ್ಕಿರಪ್ಪ , ಮುಖ್ಯೋಪಾಧ್ಯಾಯರಾದ ಎಸ್.ಡಿ.ಮುಡೆಣ್ಣವರ ಹಾಗೂ ಶಾಲಾ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.